ಮಂಗಳೂರು| ವೀಸಾ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ; ಪ್ರಕರಣ ದಾಖಲು

ಮಂಗಳೂರು, ಜ.9: ವೀಸಾ ನೀಡುವುದಾಗಿ ಹೇಳಿ ರೋಯನ್ ಆಲ್ವಿನ್ ಲೋಬೋ ಮತ್ತು ರಿಯೋನ್ ತೌರೋ ಎಂಬವರಿಂದ ಹಣ ಪಡೆದು ವಂಚಿಸಿರುವ ಸ್ಟ್ಯಾನಿ ಡಿಸೋಜ ಮತ್ತವರ ಪುತ್ರಿ ರೆಮಿ ಡಿಸೋಜ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃತ್ತಿಯಲ್ಲಿ ಚಾಲಕನಾಗಿರುವ ರೋಯನ್ ಆಲ್ವಿನ್ ಲೋಬೋ ಮತ್ತವರ ಅಕ್ಕನ ಮಗ ರಿಯೋನ್ ತೌರೋ ವಿದೇಶ ದಲ್ಲಿ ಕೆಲಸ ಹುಡುಕುತ್ತಿದ್ದರು. 2024ರ ಡಿಸೆಂಬರ್‌ನಲ್ಲಿ ಮೂಲ್ಕಿ ಕಿನ್ನಿಗೋಳಿಯ ಗುರುಗಳು ಯುರೋಪ್ ದೇಶದಲ್ಲಿ ಕೆಲಸಗಳಿದೆ. ಬೇಕಾದವರು ಉಡುಪಿಯಲ್ಲಿರುವ ಡೊನಾಲ್ಡ್ ಮಾಲಕತ್ವದ ಸುವಿಧಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಅದರಂತೆ ರೋಯನ್ ಆಲ್ವಿನ್ ಲೋಬೋ ಹಾಗೂ ರಿಯೋನ್ ತೌರೋ ಉಡುಪಿಗೆ ತೆರಳಿ ನೀಡಿದ ಸ್ಟ್ಯಾನಿ ಡಿಸೋಜರನ್ನು ಸಂಪರ್ಕಿಸಿದಾಗ ವೀಸಾ ಇದೆ ಎಂದಿದ್ದರು. ಅದರಂತೆ ಇಬ್ಬರಿಂದ 5 ಲಕ್ಷ ರೂ. ಪಡೆದು ವೀಸಾ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story





