ಮಂಗಳೂರು | ಮಿಲಾಗ್ರಿಸ್ ಕಾಲೇಜಿನಲ್ಲಿ ‘ಗುಮಟ್ ಗಿನ್ಯಾನ್’ ತರಬೇತಿ ಶಿಬಿರ

ಮಂಗಳೂರು, ನ 27: ಮಿಲಾಗ್ರಿಸ್ ಕಾಲೇಜು ಮಂಗಳೂರು ಇದರ ಕೊಂಕಣಿ ಸಂಘದ ವತಿಯಿಂದ ಮಾಂಡ್ ಸೋಭಾಣ್ ಸಹಯೋಗದೊಂದಿಗೆ ‘ಗುಮಟ್ ಗಿನ್ಯಾನ್’ ಒಂದು ದಿನದ ಗುಮ್ಟಾ ತರಬೇತಿ ಕಾರ್ಯಗಾರವು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಂಡ್ ಸೋಭಾಣ್ ಅಧ್ಯಕ್ಷ ಲುವಿ ಪಿಂಟೊ ಮಾತನಾಡಿ, ‘ಗುಮ್ಟಾ ನಮ್ಮ ಸಂಸ್ಕೃತಿಯ ಪ್ರತೀಕ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ. ವಿದ್ಯಾರ್ಥಿಗಳ ಮೂಲಕ ಇಂತಹ ಒಂದು ಕಲೆಯನ್ನು ನಮ್ಮ ಮುಂದಿನ ಜನಾಂಗಕ್ಕೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ರೆ. ಡಾ.ಆಲ್ವಿನ್ ಸೇರಾವೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಗಾರದಲ್ಲಿ ಗುಮ್ಟಾವಾದಕರಾದ ಜಾಯೆಲ್ ಪಿರೇರಾ, ಜಾಸ್ಮಿನ್ ಲೋಬೊ, ನಿಕೋಲ್ ಮೋರಸ್, ಡೆಲ್ಟಾನ್ ಲೋಬೊ ಅವರು ವಿದ್ಯಾರ್ಥಿಗಳಿಗೆ ಗುಮಟವಾದನದ ತರಬೇತಿಯನ್ನು ನೀಡಿದರು. 40 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಂಡ್ ಸೋಭಾಣ್ನ ಸದಸ್ಯರಾದ ಕಿಶೋರ್ ಫೆರ್ನಾಂಡಿಸ್, ಕಾಲೇಜಿನ ಕೊಂಕಣಿ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಆಸ್ಟಿನ್ ಡಿ ಸೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿ ಜಾಸ್ಲಿನ್ ವಾಲ್ಡರ್ ಕಾರ್ಯಕ್ರಮ ನಿರೂಪಿಸಿದರು ಕಾಲೇಜಿನ ಕೊಂಕಣಿ ಸಂಘದ ಸಂಚಾಲಕಿ ಟ್ರೆಸ್ಸಿ ಪಿಂಟೊ ವಂದಿಸಿದರು.







