ಮಂಗಳೂರು | ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಸನ್ಮಾನ

ಮಂಗಳೂರು, ಡಿ.3: ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ವತಿಯಿಂದ ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ರಾಜ್ಯ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ನೂತನ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ನೂತನ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಅವರನ್ನು ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಸನ್ಮಾನಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಮಾಜಿ ಮೇಯರ್ ಕೆ. ಅಶ್ರಫ್, ಕೆ.ಎಸ್.ಇಮ್ತಿಯಾಝ್ ಅಹ್ಮದ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಹಾಜಿ ಬಿ.ಅಬೂಬಕರ್, ಡಾ.ಮುಹಮ್ಮದ್ ಆರಿಫ್ ಮಸೂದ್, ಸಿ.ಎಂ. ಹನೀಫ್, ಹಾಜಿ ರಿಯಾಝುದ್ದೀನ್, ಎಂ.ಎ. ಅಶ್ರಫ್, ಹಾಜಿ ಮೊಯ್ದಿನ್ ಮೋನು, ಎನ್.ಕೆ. ಅಬೂಬಕರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಹಾಜಿ ಅಬ್ದುಲ್ ಮಜೀದ್ ಸಿತಾರ್, ಅಬ್ಬಾಸ್ ಉಚ್ಚಿಲ್, ಅಬ್ದುಲ್ ಖಾದರ್ ವಿಟ್ಲ, ಇಕ್ಬಾಲ್ ಅಹ್ಮದ್ ಮುಲ್ಕಿ, ಅಸ್ಗರ್ ಅಲಿ ಉಪ್ಪಿನಂಗಡಿ, ಎಂ. ಅನ್ವರ್ ರಿಕೋ, ಹಾಜಿ ಎಸ್.ಎ. ಖಲೀಲ್ ಅಹ್ಮದ್, ಮುಹಮ್ಮದ್ ಸಲೀಂ ಮನ್ನತ್, ಶೇಕ್ ಫರೀದ್, ವಾಸಿಮ್ ಕುಂದಾಪುರ, ಸಂಶುದ್ದೀನ್ ಸುಳ್ಯ, ಬಿ.ಎಸ್. ಇಸ್ಮಾಯೀಲ್ ತಲಪಾಡಿ, ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ, ಮಾಜಿ ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಎಚ್.ಬಿ.ಟಿ., ಸಂಶುದ್ದೀನ್ ಬಂದರ್ ಉಪಸ್ಥಿತರಿದ್ದರು.





