ಮಂಗಳೂರು | ಎಂಆರ್‌ಸಿ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್ ಉದ್ಘಾಟನೆ

ಮಂಗಳೂರು, ಡಿ. 1: ಕದ್ರಿ ಜುಗುಲ್ ಟವರ್ಸ್‌ನಲ್ಲಿರುವ ಮಂಗಳೂರು ರೈಫಲ್ ಕ್ಲಬ್ (ಎಂಆರ್‌ಸಿ)ನಲ್ಲಿ 7-ಲೇನ್ ಸಂಪೂರ್ಣ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್‌ನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು ಪಿಸ್ತೂಲ್, ಪೀಪ್-ಸೈಟ್ ರೈಫಲ್ ಮತ್ತು ಓಪನ್-ಸೈಟ್ ರೈಫಲ್ ಶೂಟಿಂಗ್ ಅಭ್ಯಾಸ ನಡೆಸಿದರು. ಅವರು ಹೊಸ ಸೌಲಭ್ಯ ಮತ್ತು ಇರುವ ಸೌಲಭ್ಯವನ್ನು ಪರಿಶೀಲಿಸಿ, ತರಬೇತುದಾರರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಥ್ಲೀಟ್‌ಗಳಿಗೆ ಗೌರವ :
ಈ ಕಾರ್ಯಕ್ರಮದಲ್ಲಿ ಜುಗುಲ್ ಟವರ್ಸ್ ಮಾಲಕ ಜುಗುಲ್ ಸಲ್ದಾನ ಅವರು ಎಂಆರ್‌ಸಿಯ ಅಥ್ಲೀಟ್‌ಗಳಾದ ಎವನಿ ರೈ ಮತ್ತು ಬಿನು ನಿನಾನ್ ಅವರನ್ನು ಸನ್ಮಾನಿಸಿದರು.
ಎಂಆರ್‌ಸಿ ಸ್ಥಾಪಕ ಮುಕೇಶ್ ಕುಮಾರ್, ಕ್ಲಬ್ ಅಧ್ಯಕ್ಷ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
Next Story







