ಮಂಗಳೂರು | ಜೆ.ಎಫ್. ಡಿಸೋಜಾರ ‘ಭಾಂಗಾರಾಚೊ ಕೊಳ್ಸೊ’ ಕೃತಿ ಬಿಡುಗಡೆ

ಮಂಗಳೂರು, ಡಿ.17: ಕೊಂಕಣಿ ಸಾಹಿತಿ, ಲೇಖಕ ಜೆ.ಎಫ್. ಡಿಸೋಜಾರ 18ನೆ ಕಥೆ ಪುಸ್ತಕ ‘ಭಾಂಗಾರಾಚೊ ಕೊಳ್ಸೊ’ (ಬಂಗಾರದ ಗಡಿಗೆ) ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಾಹಿತಿ ರೊನಾಲ್ಡ್ ರೋಚ್ ಕಾಸ್ಸಿಯಾ ಅವರು ಬುಧವಾರ ಬಿಡುಗಡೆಗೊಳಿಸಿದರು.
ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೆ.ಎಫ್. ಡಿಸೋಜಾ, ಮಕ್ಕಳ ಕಥೆಗಳು, ಇತರ ಕಥೆ, ಚುಟುಕುಗಳ ಮೂಲಕ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. 2004ರಲ್ಲಿ ಇವರ ಭಾಂಗಾರಾಚಿ ಮಾಸ್ಲಿ ಕೊಂಕಣಿ ಮಕ್ಕಳ ಕಥೆಗಳ ಪ್ರಥಮ ಆವೃತ್ತಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಲಂಡನ್‌ನ ಕೊಂಕಣಿ ಫ್ರೆಂಡ್ಸ್ ಕಾಮ್ ಕೊಂಕಣ್ ಸ್ಟಾರ್ ಬಿರುದು ನೀಡಿ ಸನ್ಮಾನಿಸಿದೆ. 2018ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿದೆ ಎಂದು ಸಾಹಿತಿ ಡಾಲ್ಪಿ ಲೋಬೋ ಅವರು ಕೃತಿಕಾರರ ಪರಿಚಯ ನೀಡಿದರು.
ಕೃತಿ ಬಿಡುಗಡೆ ಸಮಾರಂಭದಲ್ಲಿ ಜಾನೆಟ್ ಡಿಸೋಜಾ, ಮಾರ್ಸೆಲ್ ಡಿಸೋಜಾ, ಡ್ಯಾಫ್ನಿ ಮಿನೇಜಸ್ ಉಪಸ್ಥಿತರಿದ್ದರು.
Next Story





