ಮಂಗಳೂರು | ಡಿ.16ರಂದು ತುಳು ನಾಡು ನುಡಿಗೆ ಜೈನರ ಕೊಡುಗೆ’ ಉಪನ್ಯಾಸ
ಮಂಗಳೂರು, ಡಿ.12: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ’ತುಳು ನಾಡು-ನುಡಿಗೆ ಜೈನರ ಕೊಡುಗೆ’ ಎಂಬ ವಿಷಯದ ಬಗ್ಗೆ (ಎಂ.ಕೆ. ರವೀಂದ್ರನಾಥ ದತ್ತಿ) ಉಪನ್ಯಾಸ ಮತ್ತು ತುಳು ತಾಳಮದ್ದಳೆ ಕಾರ್ಯಕ್ರಮ ಮೂಡುಬಿದಿರೆ ಜೈನ ಮಠದಲ್ಲಿ ಡಿ.16ರಂದು ಮಧ್ಯಾಹ್ನ 2ಕ್ಕೆ ನಡೆಯಲಿದೆ.
ಮೂಡುಬಿದಿರೆ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಉಜಿರೆ ಎಸ್ಡಿಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಉಪನ್ಯಾಸ ನೀಡುವರು. ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





