ಮಂಗಳೂರು: ವಸತಿಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು, ಸೆ.8: ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಬಳಿಯ ವಸತಿಗೃಹದಲ್ಲಿ ಬಿಜೈ ಆನೆಗುಂಡಿ ನಿವಾಸಿ ನವೀನ್ ಇಗ್ನೇಶಿಯಸ್ ನಝ್ರತ್ (45) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ನವೀನ್ ಸುಮಾರು 20 ವರ್ಷದಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಜುಲೈಯಲ್ಲಿ ವಿದೇಶದಿಂದ ಬಂದಿದ್ದ ಅವರು ಮಾನಸಿಕ ಖಿನ್ನತೆಯ ಸಮಸ್ಯೆಯಿಂದ ಮತ್ತೆ ವಿದೇಶಕ್ಕೆ ತೆರಳಿರಲಿಲ್ಲ ಎನ್ನಲಾಗಿದೆ. ಸೆ.7ರಂದು ಬೆಳಗ್ಗೆ 9:15ರ ವೇಳೆಗೆ ಚರ್ಚ್‌ಗೆ ತೆರಳಿದ್ದ ವೇಳೆ ನವೀನ್ ಮನೆಯಿಂದ ಹೊರಹೋಗಿದ್ದರು.
ನವೀನ್ ನಾಪತ್ತೆಯಾಗಿರುವ ಬಗ್ಗೆ ಮನೆಮಂದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಿಂದ ಹೊರ ಹೋಗಿದ್ದ ನವೀನ್ ಕೆಎಸ್ಸಾರ್ಟಿಸಿಯ ಲಾಡ್ಜೊಂದರಲ್ಲಿ ರೂಮು ಮಾಡಿದ್ದು, ಬಳಿಕ ಅಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸತಿಗೃಹ ಸಿಬ್ಬಂದಿಯು ಸೋಮವಾರ ರೂಮು ಪರಿಶೀಲನೆ ನಡೆಸುವಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





