Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. Mangaluru | ಎಂ.ಸಿ.ಸಿ. ಬ್ಯಾಂಕಿನ...

Mangaluru | ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ5 Dec 2025 8:39 PM IST
share
Mangaluru | ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ

ಮಂಗಳೂರು,ಡಿ.5 : ಎಂಸಿಸಿ ಬ್ಯಾಂಕ್, ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯನ್ನು ಶುಕ್ರವಾರ ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು.

ನವೀಕರಿಸಿದ ಶಾಖೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜಾ ಉದ್ಘಾಟಿಸಿ, ತಮ್ಮ ಭಾಷಣದಲ್ಲಿ ಅವರು ಬ್ಯಾಂಕಿನ ಪ್ರಗತಿಗೆ ಕಾರಣಕರ್ತರಾದ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಗ್ರಾಹಕರ ನಿರಂತರ ಬೆಂಬಲದೊಂದಿಗೆ ನಿರ್ದೇಶಕರು ಮತ್ತು ಸಿಬ್ಬಂದಿಯ ಸಂಯೋಜಿತ ಪ್ರಯತ್ನಗಳ ಮೂಲಕ ಉತ್ತಮ ಸಾಲ ನೀಡುವಿಕೆ ಮತ್ತು ಸಕಾಲಿಕ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲು ಅವರು ಸಲಹೆ ನೀಡಿದರು.

ಅಧ್ಯಕ್ಷರಾದ ಅನಿಲ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ದೃಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲಾ 16 ಶಾಖೆಗಳನ್ನು ನವೀಕರಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕಂಕನಾಡಿ ಶಾಖೆಯು 54 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಗ್ರಾಹಕರು ತಮ್ಮ ವಹಿವಾಟುಗಳನ್ನು ಸಂತೋಷದಾಯಕವಾಗಿ ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವೀಕರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಕೇವಲ 16 ಶಾಖೆಗಳಿದ್ದು, ಕಳೆದ 7 ವರ್ಷಗಳಲ್ಲಿ, 22 ವರ್ಷಗಳ ನಂತರ ಐದು ಹೊಸ ಶಾಖೆಗಳನ್ನು ತೆರೆಯಲಾಗಿದೆ. ಆರ್‌ಬಿಐ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪ್ರಸ್ತುತ ಆಡಳಿತ ಮಂಡಳಿಯು 2018 ರಲ್ಲಿ ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳನ್ನು ಪೂರೈಸಿದ್ದು, ಇಂದು ಒಟ್ಟು 21 ಶಾಖೆಗಳು ಮತ್ತು 15 ಎಟಿಎಂಗಳನ್ನು ಹೊಂದಿದೆ ಎಂದರು.

ಮುಂದಿನ ಹಣಕಾಸು ವರ್ಷದಲ್ಲಿ ದೇರಳಕಟ್ಟೆ, ಕಟಪಾಡಿ, ಪಡೀಲ್ ಮತ್ತು ಮುಡಿಪು ಅಥವಾ ವಾಮಂಜೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯಲು ಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರಾದ್ಯಂತ ಬ್ಯಾಂಕ್ ಬೆಳೆಯಲು ಅನುವು ಮಾಡಿಕೊಡಲು ಗ್ರಾಹಕರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿ ಸ್ವಾಗತಿಸಿದರು.

ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬ್ಯಾಂಕಿನ ಬೆಳವಣಿಗೆಗೆ ಅಧ್ಯಕ್ಷರನ್ನು ಅಭಿನಂದಿಸಿ, ಗಣ್ಯರು, ಸಿಬ್ಬಂದಿ ಮತ್ತು ಗ್ರಾಹಕರ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮುಖ್ಯ ಅತಿಥಿ ವಂ.ಜೆ.ಬಿ.ಕ್ರಾಸ್ತಾ ಅವರು ತಮ್ಮ ಭಾಷಣದಲ್ಲಿ, ಗ್ರಾಹಕರಿಗೆ ಬ್ಯಾಂಕ್ ನೀಡುವ ಅನುಕರಣೀಯ ಸೇವೆ ಮತ್ತು ಸುರಕ್ಷತೆಗಾಗಿ ಸಂತೋಷ ವ್ಯಕ್ತಪಡಿಸಿದರು.

ವಂ ಫೌಸ್ಟಿನ್ ಲೋಬೊ ತಮ್ಮ ಭಾಷಣದಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸಲು ಬ್ಯಾಂಕ್ ತನ್ನ ಸೌಲಭ್ಯಗಳು ಮತ್ತು ಸೇವೆಗಳನ್ನು ಸುಧಾರಿಸುವ ಮೂಲಕ ಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಬೇಕು ಎಂದು ಹೇಳಿ ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು. ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜಾ ಶುಭ ಹಾರೈಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್ & ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಕೊರಿನ್ ರಸ್ಕಿನ್ಹಾ ಅವರನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ಹೂವಿನ ಪುಷ್ಪಗುಚ್ಛದೊಂದಿಗೆ ಸನ್ಮಾನಿಸಲಾಯಿತು. ಮೈಕೆಲ್ ಡಿಸೋಜಾ ಅವರನ್ನು ಗೌರವಿಸಲಾಯಿತು.

ಡಿ.11 ರಂದು ಚಂಡೀಗಢದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಪಂದ್ಯದಲ್ಲಿ ಎಸ್‌ಬಿಐ ಲೈಫ್ ಪರವಾಗಿ ಕ್ರಿಕೆಟ್ ತಾರೆಯೊಬ್ಬರಿಗೆ ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆಯಾಗಿದ್ದಕ್ಕಾಗಿ ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು.

ಇತ್ತೀಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ‘ಬಾಪಾಚೆ ಪುತಾಚೆ ನಾವಿ’ ದಲ್ಲಿ ನಟಿಸಿರುವ ಮೆಲ್ವಿನ್ ಡಿಅಲ್ಮೇಡಾ ಅವರನ್ನು ಸಹ ಸನ್ಮಾನಿಸಲಾಯಿತು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಕಂಕನಾಡಿ ಶಾಖಾ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ, ನಿರ್ದೆಶಕರಾದ ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಜೆ.ಪಿ.ರೊಡ್ರಿಗಸ್, ಐರೀನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಶ ರೋಶನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಮೊಂತೇರೊ, ಜನರಲ್ ಮ್ಯಾನೇ ಜರ್ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ಐಡಾ ಪಿಂಟೊ, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X