ಮಂಗಳೂರು : ಪಿಲಿಕುಳದಲ್ಲಿ 'ಮೈಕಲ್ ಡಿಸೋಜ ಮತ್ತು ಕುಟುಂಬ' ಗಾಲ್ಫ್ ಅಕಾಡೆಮಿಗೆ ಶಿಲಾನ್ಯಾಸ

ಮಂಗಳೂರು : ಪಿಲಿಕುಳ ನಿಸರ್ಗಧಾಮದ ಬಳಿ ನವೀಕರಣಗೊಂಡ ಪಿಲಿಕುಲ ಗಾಲ್ಫ್ ಕೋರ್ಸ್ ಲೋಕಾರ್ಪಣೆ ಹಾಗೂ ನೂತನವಾದ ನಿಟ್ಟೆ ವಿನಯ್ ಹೆಗ್ಡೆ ಮೆಮೋರಿಯಲ್ ಕ್ಲಬ್ ಹೌಸ್ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಇದೇ ವೇಳೆ ಮೈಕಲ್ ಡಿಸೋಜ ಮತ್ತು ಕುಟುಂಬ ಗಾಲ್ಫ್ ಅಕಾಡೆಮಿಗೆ ಶಿಲಾನ್ಯಾಸ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗು ವಿಷನ್ ಕೊಂಕಣಿಯ ಪ್ರವರ್ತಕ, ಕೊಡುಗೈ ದಾನಿ ಮೈಕಲ್ ಡಿಸೋಜ ಅವರು ಯುವಜನರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಗಾಲ್ಫ್ ಅಕಾಡೆಮಿಯನ್ನು ಪ್ರಾಯೋಜಿಸಿದ್ದಾರೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮನೋಜ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ರಾವ್, ಕೋಶಾಧಿಕಾರಿ ನಿತಿನ್ ಜೆ.ಶೆಟ್ಟಿ, ಮೈಕಲ್ ಡಿಸೋಜಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೈಕಲ್ ಡಿಸೋಜ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಿಲಿಕುಳ ಗಾಲ್ಫ್ ಕೋರ್ಸ್ ನಲ್ಲಿ ಜ.31 ರಂದು ಭಾರತದ ಮೊದಲ ಫ್ಲಡ್ ಲೈಟ್ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್ ನಡೆಯಲಿದೆ.







