ಮಂಗಳೂರು | ಕಾಣೆಯಾಗಿದ್ದ ವ್ಯಕ್ತಿ ಆಶ್ರಮದಲ್ಲಿ ಪತ್ತೆ

ಮಂಗಳೂರು, ನ.18: ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಆರಂಭಿಸಿರುವ ಕಾಣೆಯಾದ ವ್ಯಕ್ತಿಗಳ ಪತ್ತೆ ಕಾರ್ಯ ಅಭಿಯಾನಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ.
ಸುಮಾರು 8 ವರ್ಷದ ಹಿಂದೆ ಅಂದರೆ 2018ರ ಆಗಸ್ಟ್ 25ರಿಂದ ಪೀಟರ್ ಮೆಂಡೋನ್ಸಾ ಎಂಬವರು ಕಾಣೆಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರಿಗಾಗಿ ದ.ಕ.ಜಿಲ್ಲೆಯಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವಿವಿಧೆಡೆ ಅದರಲ್ಲೂ ಎಲ್ಲಾ ಆಶ್ರಮ, ನಿರಾಶ್ರಿತರ ಕೆಂದ್ರಗಳಿಗೆ ತೆರಳಿ ಕಾರ್ಯಾಚರಣೆ ತೀವ್ರಗೊಳಿಸಲಾಯಿತು.
ಅಂತಿಮವಾಗಿ ನ.8ರಂದು ನಗರದ ವೆಲೆನ್ಸಿಯಾ ಚರ್ಚ್ ಬಳಿಯ ಆಶ್ರಮದಲ್ಲಿ ಪೀಟರ್ ಮೆಂಡೋನ್ಸಾರನ್ನು ಕಂಕನಾಡಿ ನಗರ ಠಾಣೆಯ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್, ಎಸ್ಸೈಗಳಾದ ಅನಿತಾ, ಶಿವಕುಮಾರ್, ಪೊಲೀಸ್ ಕಾನ್ಸ್ಟೇಬಲ್ ಶಿವಾನಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Next Story





