ಮಂಗಳೂರು | ಕಂದಕ್ ಗಲ್ಲಿ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಯ ಲಾಂಛನ ಬಿಡುಗಡೆಗೊಳಿಸಿದ ಮೊಹಮ್ಮದ್ ಶಮಿ

ಮಂಗಳೂರು : ಮಂಗಳೂರಿನ ಕಂದಕ್ ಪರಿಸರದ ಗಲ್ಲಿ ಕ್ರೀಡಾಂಗಣದಲ್ಲಿ ನಡೆಯುವ ಅಂಡರ್ ಆರ್ಮ್ ಕ್ರಿಕೆಟ್ 'ಗಲ್ಲಿ ಪ್ರೀಮಿಯರ್ ಲೀಗ್' 5ನೇ ವರ್ಷದ ಕ್ರಿಕೆಟ್ ಸಂಭ್ರಮಾಚರಣೆಯ ಲಾಂಛನವನ್ನು ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಬಿಡುಗಡೆಗೊಳಿಸಿದರು.
ಗಲ್ಲಿ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ ಡಿ.26 ರಿಂದ ಜ.4 ರವರೆಗೆ ನಡೆಯಲಿದೆ.
ಈ ವೇಳೆ ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಆಸೀಫ್, ತಾಹಿರ್, ಮುಸ್ತಫಾ, ಅನ್ಸಾಫ್, ಹಸನ್, ಹಕೀಮ್, ಮುಕ್ತಾರ್, ಸಿದ್ದಿಕ್ ಮತ್ತಿತರರು ಉಪಸ್ಥಿತರಿದ್ದರು.
Next Story







