ಮಂಗಳೂರು | ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು, ಡಿ.5: ಕಾಸರಗೋಡಿನ ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ನ ಸಾರಥಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಳ್ರ 20ನೇ ಉರೂಸ್ ಮುಬಾರಕ್ ಹಾಗೂ ಸನದುದಾನ ಸಮ್ಮೇಳನವು 2026ರ ಜ.28, 29, 30, 31ರಂದು ನಡೆಯಲಿದೆ.
ಇದರ ಪ್ರಚಾರಾರ್ಥವಾಗಿ ಕರ್ನಾಟಕದ 10 ಕೇಂದ್ರಗಳಲ್ಲಿ ಸಮಾವೇಶ, 500 ಹಿಮಮಿಗಳ ಸಮಾವೇಶವೂ ಜರುಗಲಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯು ಮುಹಿಮ್ಮಾತ್ ನಲ್ಲಿ ನಡೆದು ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷರಾಗಿ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಇಸ್ಹಾಕ್ ಹಾಜಿ ಬೊಳ್ಳಾಯಿ, ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ಮೆಹ್ಬೂಬ್ ಸಖಾಫಿ ಕಿನ್ಯ, ಹಸೈನಾರ್ ಆನೆಮಹಲ್ ಸಕಲೇಶಪುರ, ಖಲೀಲ್ ಮಾಲಿಕಿ ಬೋಳಂತೂರು, ಮುಖು ಸಂಯೋಜಕರಾಗಿ ಕೆ.ಕೆ.ಎಂ. ಕಾಮಿಲ್ ಸಖಾಫಿ, ಸಂಯೋಜಕರಾಗಿ ಕೆ.ಕೆ. ಅಶ್ರಫ್ ಸಖಾಫಿ ಹಿಮಮಿ ಸುರಿಬೈಲ್, ರವೂಫ್ ಹಿಮಮಿ ಸಖಾಫಿ, ಇಬ್ರಾಹಿಂ ಸಖಾಫಿ ಪಯೊಟ್ಟ ಆಯ್ಕೆಯಾದರು.





