MANGALURU | ಮುಳಿಹಿತ್ಲು: ‘ಅಂಬರ್ ರೆಸಿಡೆನ್ಸಿ’ ಮಾಹಿತಿ ಕೈಪಿಡಿ ಬಿಡುಗಡೆ

ಮಂಗಳೂರು, ಡಿ.14: ನಗರದ ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಅರ್ಫಾ ಬಿಲ್ಡರ್ಸ್ ಸಂಸ್ಥೆಯಿಂದ ಮುಳಿಹಿತ್ಲುವಿನಲ್ಲಿ ನಿರ್ಮಾಣಗೊಳ್ಳಲಿರುವ ವಸತಿ ಸಮುಚ್ಚಯ ‘ಅಂಬರ್ ರೆಸಿಡೆನ್ಸಿ’ ಇದರ ಮಾಹಿತಿ ಕೈಪಿಡಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ರವಿವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವ ಮಂಗಳೂರು ಇದೀಗ ಬಹುಮಹಡಿಗಳ ಕಟ್ಟಡಗಳ ನಿರ್ಮಾಣ ಕ್ಷೇತ್ರದಲ್ಲಿ ಇದೀಗ ತನ್ನದೇ ಆಗಿರುವ ಛಾಪನ್ನು ಮೂಡಿಸಿದೆ ಎಂದರು.
ಕಟ್ಟಡದ ಗುಣಮಟ್ಟ ಮತ್ತು ವಿನ್ಯಾಸ ಉತ್ತಮವಾಗಿರುವುದರಿಂದ ದೂರದ ಊರಿನವರು ಕೂಡಾ ಮಂಗಳೂರಿನ ಫ್ಲ್ಲಾಟ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅರ್ಫಾ ಬಿಲ್ಡರ್ಸ್ ಐದು ವರ್ಷಗಳಲ್ಲಿ ‘ಅರ್ಫಾ ಮೀರಾಜ್ ಟವರ್’ ಮತ್ತು ಅರ್ಫಾ ಮೆಡೋಸ್ ’ ಎರಡು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಂಸ್ಥೆಯು ಕಾಲಮಿತಿಯೊಳಗೆ ಎರಡೂ ಯೋಜನೆಗಳ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜನರ ವಿಶ್ವಾಸ ಗಳಿಸಿರುವುದರಿಂದ ಮೂರನೇ ಪ್ರಾಜೆಕ್ಟ್ ಅಂಬರ್ ರೆಸಿಡೆನ್ಸಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಶೇ.50ಕ್ಕೂ ಅಧಿಕ ಫ್ಲ್ಯಾಟ್ ಗಳು ಬುಕ್ಕಿಂಗ್ ಆಗಿರುವುದು ಸಂಸ್ಥೆಯ ಮೇಲೆ ಜನರಿಗಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
ಮನಪಾ ಮಾಜಿ ಸದಸ್ಯೆ ರೇವತಿ ಶಾಮ ಸುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮನಪಾ ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್., ಮಾಜಿ ಸದಸ್ಯ ಅಬ್ದುಲ್ ರವೂಫ್ , ಚಾರ್ಟರ್ಡ್ ಅಕೌಂಟೆಂಟ್ ಕೆ.ದೇವದಾಸ್ ನಾಯಕ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಅಬ್ದುಲ್ ರಹ್ಮಾನ್ ಶಾಬಾನ್ ಕಂಕನಾಡಿ, ಅರ್ಫಾ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ನೌಶಾದ್ ಪಡೀಲ್ ಮತ್ತು ನಿರ್ದೇಶಕ ಮೊಹಿದೀನ್ ಎ.ಕೆ., ಅಂಬರ್ ರೆಸಿಡೆನ್ಸಿಯ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಆಂಡ್ ಕನ್ಸಲ್ಟೆಂಟ್ ಆಗಿರುವ ನ್ಯೂ ಡಿಸೈನ್ ಹೋಮ್ ನ ಪಾಲುದಾರ ಇಂಜಿನಿಯರ್ ಸಾದಿಕ್ ಎ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯೂ ಡಿಸೈನ್ ಹೋಮ್ ನ ಪಾಲುದಾರ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ವಂದಿಸಿದರು. ವಿಜೆ. ಶಿಶಾನ್ ಕಾರ್ಯಕ್ರಮ ನಿರೂಪಿಸಿದರು.







