ಮಂಗಳೂರು | ನ.26: ಸಂವಿಧಾನ ಪೀಠಿಕೆಯ ತುಳು ಓದು ಕಾರ್ಯಕ್ರಮ

ಮಂಗಳೂರು, ನ.25: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಭಾರತ ಸಂವಿಧಾನದ ಪೀಠಿಕೆಯನ್ನು ತುಳು ಭಾಷೆಗೆ ಭಾಷಾಂತರಿಸಿ ಪಠ್ಯದ ಫಲಕ ಬಿಡುಗಡೆ ಮಾಡಿದೆ.
ನ.26ರ ಸಂವಿಧಾನ ದಿನ ಕಾರ್ಯಕ್ರಮದ ಬಳಿಕ ನಗರದ ವಿವಿಧ ಕೇಂದ್ರಗಳಲ್ಲಿ ಸಂವಿಧಾನ ಪೀಠಿಕೆಯನ್ನು ತುಳುವಿನಲ್ಲಿ ಓದುವ ಅಭಿಯಾನ ನಡೆಯಲಿದೆ. ಸಂವಿಧಾನದ ಉದಾತ್ತ ಮೌಲ್ಯವನ್ನು ಪ್ರಾದೇಶಿಕ ಭಾಷೆಯ ಮೂಲಕ ತಳಮಟ್ಟದಲ್ಲಿ ಪಸರಿಸುವ ಆಶಯ ಹಾಗೂ ಪ್ರಾದೇಶಿಕ ಭಾಷೆಗಳ ಮೂಲಕ ಸಂವಿಧಾನದ ಸಮಗ್ರತೆಯನ್ನು ಅರ್ಥೈಸಿಕೊಳ್ಳುವ ಮತ್ತು ಅನುಷ್ಠಾನ ಮಾಡುವ ಸಂಕಲ್ಪದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
Next Story





