ಮಂಗಳೂರು| ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎನ್ಎಸ್ಎಸ್ ಘಟಕ, ಯೂತ್ ರೆಡ್ ಕ್ರಾಸ್ ಸೊಸೈಟಿ, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಆಲ್ ಇಂಡಿಯಾ ಪಯಾಮ್-ಎ-ಇನ್ಸಾನಿಯತ್ ಫೋರಮ್, ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಹಯೋಗದೊಂದಿಗೆ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಬಿಐಟಿ ಪ್ರಾಂಶುಪಾಲರಾದ ಡಾ. ಎಸ್. ಐ. ಮಂಝೂರ್ ಬಾಷಾ ಗಣ್ಯರನ್ನು ಸ್ವಾಗತಿಸಿದರು ಮತ್ತು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಇಕ್ರಾ ಅರೇಬಿಕ್ ಶಾಲೆಯ ಪ್ರಾಂಶುಪಾಲರಾದ ಮೌಲಾನಾ ಸಲೀಂ ನದ್ವಿ, ಮಂಗಳೂರಿನ ಇಕ್ರಾ ಅರೇಬಿಕ್ ಶಾಲೆಯ ಶಿಕ್ಷಕರು ಮತ್ತು AIPIF ಸದಸ್ಯರಾದ ಮುಹಮ್ಮದ್ ಫರಾಹನ್ ನದ್ವಿ ಪ್ರೇರಣಾ ಭಾಷಣ ಮಾಡಿದರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧಿಕಾರಿ ಡಾ.ಸಲ್ಮಾನ್ ಅನ್ಸಾರಿ, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ರಕ್ತ ಸಂಗ್ರಹಣ ಕೇಂದ್ರದ ಸಂಪರ್ಕ ಅಧಿಕಾರಿ ಡಾ. ತೀರ್ಥ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಸ್ಥಾಪಕ ಅಧ್ಯಕ್ಷರಾದ ಸಿದ್ದಿಕ್ ಮಂಜೇಶ್ವರ, ಬಿಐಟಿ NSS ಅಧಿಕಾರಿ ಡಾ.ಕಫೀಲ್ ಡೆಲ್ವಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶಿಬಿರವನ್ನು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಝಹೀರ್ ಅಹ್ಮದ್ ಮತ್ತು ಸಿಎಸ್ಇ ವಿಭಾಗದ ಪ್ರೊ.ಮುಹಮ್ಮದ್ ಸಿನಾನ್ ಸಂಯೋಜಿಸಿದರು. ಶಿಬಿರದಲ್ಲಿ 110ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸ ಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಅರ್ಶನ್ ಎಂ ಕೆ ಧನ್ಯವಾದಗಳನ್ನು ಸಲ್ಲಿಸಿದರು. ವಿದ್ಯಾರ್ಥಿನಿ ಫರಿಯಾ ನಾಝ್ ನಿರೂಪಿಸಿದರು.