ಮಂಗಳೂರು | ತರಕಾರಿ, ಹಣ್ಣು ವ್ಯಾಪಾರಿಗೆ ಆನ್‌ಲೈನ್ ವಂಚನೆ : ಪ್ರಕರಣ ದಾಖಲು

ಮಂಗಳೂರು, ಡಿ.5: ನಗರದ ತರಕಾರಿ ಮತ್ತು ಹಣ್ಣು ವ್ಯಾಪಾರಿಯೊಬ್ಬರಿಗೆ ಆನ್‌ಲೈನ್ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಪಾರಿಯಾಗಿರುವ ತಾನು ಬ್ಯಾಂಕ್ ಆಫ್ ಬರೋಡಾದಲ್ಲಿ ಉಳಿತಾಯ ಖಾತೆ ಹೊಂದಿರುವೆ. ಕಳೆದ ಸೆಪ್ಟಂಬರ್ ನಲ್ಲಿ ಅಪರಿಚತ ವ್ಯಕ್ತಿ ಫೇಸ್ಬುಕ್ ಮೂಲಕ ಲಿಂಕ್ ಕಳುಹಿಸಿದ. ಬಳಿಕ ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಸಾಧಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ತಿಳಿಸಿದ. ಅದನ್ನು ನಂಬಿದ ತಾನು 30,000 ರೂ. ಹೂಡಿಕೆ ಮಾಡಿದೆ. ಅದಕ್ಕೆ 34,000 ರೂ ಲಾಭಾಂಶ ನೀಡಿದ. ಆ ಬಳಿಕ ಅಪರಿಚಿತ ವ್ಯಕ್ತಿಗೆ ತಾನು ಹಂತ ಹಂತವಾಗಿ 33,11,000 ರೂ. ವರ್ಗಾಯಿಸಿದೆ. ಬಳಿಕ ಲಾಭಾಂಶವನ್ನೂ ನೀಡದೆ ಹೂಡಿಕೆ ಮಾಡಿದ ಹಣವನ್ನೂ ನೀಡದೆ ವಂಚಿಸಿರುವುದಾಗಿ ಹಣ ಕಳಕೊಂಡ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





