ಮಂಗಳೂರು: ಎ.21ರಂದು ಪಾವನಿ ಸಿಲ್ಕ್ಸ್, ಟೆಕ್ಸ್ ಟೈಲ್ಸ್ ಶುಭಾರಂಭ

ಮಂಗಳೂರು, ಎ.20: ನಗರದ ಭವಂತಿ ಸ್ಟ್ರೀಟ್ ನ ಮಹಾಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್ ಟೈಲ್ಸ್ ನ ಹೊಸ ಶಾಖೆ, ಮಂಗಳೂರಿನ 2ನೇ ಮಳಿಗೆ ಎ.21ರಂದು ಶುಭಾರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭ ಬೆಳಗ್ಗೆ 10ಕ್ಕೆ ನಡೆಯಲಿದ್ದು, ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್, ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಝ, ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್ ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ, ಕಟ್ಟಡದ ಭೂ ಮಾಲಕ ರವೀಂದ್ರ ನಿಕಂ, ಸ್ಪೀಕರ್ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ವಕೀಲರಾದ ದಯಾನಂದ ರೈ, ಅಬ್ದುಲ್ ಖಾದರ್ ಇಡ್ಯಾ, ದ.ಕ. ಟೆಕ್ಸ್ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್ ಭಾಗವಹಿಸಲಿದ್ದಾರೆ.
ಮದುವೆ, ನಿಶ್ಚಿತಾರ್ಥ ಸೇರಿದಂತೆ ಸಭೆ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹ ಮಳಿಗೆಯಲ್ಲಿರಲಿದೆ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಎ.21ರಿಂದ 30ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.10ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಪಾಲುದಾರರಾದ ಹೈದರ್ ಪಾವನಿ, ಗೌತಮ್ ಬಂಗೇರ, ಇಬ್ರಾಹೀಂ, ನರಸಿಂಹ, ನಾಗೇಶ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





