ಮಂಗಳೂರು | ಡಿ.30ರಂದು ಭೂ ಮಂಜೂರಾತಿ ಆದೇಶದ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.15: ಸುರತ್ಕಲ್ ಗ್ರಾಮದ ಮಧ್ಯಪದವು ಎಂಬಲ್ಲಿನ ಭೂ ಮಂಜೂರಾತಿ ಆದೇಶದ ಅವ್ಯವಸ್ಥೆ ವಿರೋಧಿಸಿ ಡಿ.30ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸುರತ್ಕಲ್ ವಲಯ ಸಮಿತಿ ತಿಳಿಸಿದೆ.
ಮಧ್ಯಪದವು ಎಂಬಲ್ಲಿ ವಾಸಿಸುತ್ತಿರುವ ಸುಮಾರು 31 ಬಡ ಕುಟುಂಬಗಳಿಗೆ 1986ರಲ್ಲಿ ತಲಾ 5 ಸೆಂಟ್ಸ್ ನಂತೆ ಭೂ ಮಂಜೂರಾತಿ ನೀಡಲಾಗಿದೆ. 2003ನೇ ಇಸವಿಯಲ್ಲಿ ಮತ್ತೆ ಈ ಜಾಗಕ್ಕೆ ಮಂಗಳೂರು ಮಹಾನಗರ ಪಾಲಿಕೆಯು ಹಕ್ಕುಪತ್ರ ಮತ್ತು ಆರ್ಟಿಸಿ ನೀಡಲಾಗಿದೆ. ಇದು ಗಂಭೀರ ಪ್ರಮಾಣದ ದೋಷವಾಗಿದೆ. ಇದನ್ನು ಗಮನಿಸಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸುರತ್ಕಲ್ ವಲಯ ಸಮಿತಿಯು ಜಿಲ್ಲಾಧಿಕಾರಿ, ತಹಶೀಲ್ದಾರ್, ಮಹಾನಗರ ಪಾಲಿಕೆಗೆ ಮನ ಮಾಡಿತ್ತು. ಆದರೆ ಮನವಿ ನೀಡಿ ಹತ್ತು ತಿಂಗಳು ಕಳೆದರೂ, ಕೂಡ ಯಾವುದೇ ಕ್ರಮ ವಹಿಸದ ಅಧಿಕಾರಿಗಳ ಧೋರಣೆ ಖಂಡಿಸಿ ಡಿ.30ರಂದು 3:30ಕ್ಕೆ ಸುರತ್ಕಲ್ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಘಟಕದ ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.
Next Story





