ಮಂಗಳೂರು | ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ

ಮಂಗಳೂರು, ನ.25: ನಗರದ ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಇಂಫೀನಿಟೊ 2.0 ಸೋಮವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.
ಏಷ್ಯನ್ ಮಾಸ್ಟರ್ ಅಥ್ಲೀಟ್ ಖ್ಯಾತಿಯ ರೀಟ ಡಿಸೋಜ ಉದ್ಘಾಟಿಸಿ ಮಾತನಾಡಿದರು. ಉಪ ಪ್ರಾಂಶುಪಾಲರಾದ ಆನೆಟ್ ರೀಮಾ, ಸನಾ ಝಕೀರ್, ಕ್ರೀಡಾಕೂಟ ಸಂಯೋಜಕಿ ಫರ್ಹತ್, ಹಿಬಾ ಅಂಜುಮ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಆಶಾ ಸೋನ್ಸ್ ಸ್ವಾಗತಿಸಿದರು. ಶಿಕ್ಷಕಿ ನಸೀಹಾ ಶಾ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಓಟ, ಜಿಗಿತ, ಎಸೆತ ಸ್ಪರ್ಧೆಗಳು ಹಾಗೂ ವಿವಿಧ ಗುಂಪು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸಿದರು. ಟೀಮ್ ಉತ್ಮನ್ ತಂಡ ಬಾಲಕರ ಮತ್ತು ಬಾಲಕಿಯರ ತಂಡ ಪ್ರಶಸ್ತಿಯನ್ನು ಗಳಿಸಿತು.
Next Story





