ಮಂಗಳೂರು | ಆನ್‌ಲೈನ್ ಕೆಲಸದ ಸೋಗಿನಲ್ಲಿ 10.46 ಲಕ್ಷ ರೂ. ವಂಚನೆ

ಮಂಗಳೂರು : ಆನ್‌ಲೈನ್ ಜಾಬ್ ನೀಡುವುದಾಗಿ ನಂಬಿಸಿ ಹಂತಹಂತವಾಗಿ 10.46 ಲಕ್ಷ ರೂ. ವಂಚನೆಗೈದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರಂದು ಪಿರ್ಯಾದಿದಾರರ ವಾಟ್ಸಪ್‌ಗೆ ಲಿಂಕ್‌ವೊಂದನ್ನು ಬಂದಿದ್ದು, ಅದನ್ನು ಅದುಮಿದಾಗ ಟೆಲಿಕಾಮ್ ಖಾತೆ ತೆರೆದುಕೊಂಡಿದೆ. ಅದರಲ್ಲಿ ಚಾನಲ್ ಸಿಕ್ಕಿದ್ದು, ಟೆಲಿಗ್ರಾಮ್ ಖಾತೆಗೆ ಚಾಟ್ ಮಾಡಿದಾಗ ಸಂದೇಶ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಅಂಜಲಿ ಡಿಜಿಟ್ ಕಂಪನಿ ಕೆಲಸ ಮಾಡುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಯೂಟ್ಯೂಬ್ ಚಾನೆಲ್ ಅದುಮಿದ್ದು, ಅದರಲ್ಲಿ ಒಂದು ಸ್ಕ್ರೀನ್ ಶಾರ್ಟ್‌ಗೆ 41ರೂ. ಸಿಗುವುದಾಗಿ ತಿಳಿಸಿದ್ದರು. ಅದರಂತೆ ಪಿರ್ಯಾದಿದಾರರು ದಿನಕ್ಕೆ 10ಸ್ಕ್ರೀನ್ ಶಾರ್ಟ್‌ಗಳನ್ನು ಕಳುಹಿಸಿದ್ದರು. ನಂತರ ಡಿಜಿಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ದೊರೆಯುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಪಿರ್ಯಾದಿದಾರರು ಯುಪಿಎಲ್ ನೆಫ್ಟ್ ಮತ್ತು ಆರ್‌ಟಿಜಿಎಸ್ ಮೂಲಕ ಹಂತಹಂತವಾಗಿ 10.46ಲಕ್ಷ ರೂ. ನೀಡಿ ವಂಚನೆಗೊಳಗಾಗಿದ್ದಾರೆ.
ಈ ಬಗ್ಗೆ ಪಿರ್ಯಾದಿದಾರರಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.