Mangaluru | ಯುನಿವೆಫ್ ಕುದ್ರೋಳಿ ಶಾಖಾ ವತಿಯಿಂದ ಸೀರತ್ ಮಾಸಾಚರಣೆ

ಮಂಗಳೂರು, ಡಿ.4: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಅಂಗವಾಗಿ ಯುನಿವೆಫ್ ಕುದ್ರೋಳಿ ಶಾಖಾ ವತಿಯಿಂದ ಸೀರತ್ ಮಾಸಾಚರಣೆಯ ಉದ್ಘಾಟನೆಯು ಕುದ್ರೋಳಿ ಜಾಮಿಯಾ ಮಸೀದಿಯ ಬಳಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಸೀರತ್ ಮಾಸಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಯುನಿವೆಫ್ ಕುದ್ರೋಳಿ ಶಾಖಾಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನ ಸಂಚಾಲಕ ಯು.ಕೆ.ಖಾಲಿದ್ ದಿಕ್ಸೂಚಿ ಭಾಷಣಗೈದರು. ಮಾಜಿ ಕಾರ್ಪೊರೇಟರ್ ಗಳಾದ ಅಬೂಬಕರ್ ಕುದ್ರೋಳಿ, ಶಂಸುದ್ದೀನ್ ಎಚ್.ಬಿ.ಟಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾಹಿನ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ಮುಹಮ್ಮದ್ ಆಸಿಫ್ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಶೇಖ್ ಅಹ್ಮದ್, ಫಾರೂಕ್ ಹುಸೈನ್, ಅಬೂಬಕರ್ ಉಪಸ್ಥಿತರಿದ್ದರು.
ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಲ್ಲಿ ಅಭಿಯಾನದ ಕಾರ್ಯಕ್ರಮವು ಡಿ.19ರಂದು ಕುದ್ರೋಳಿಯ ಎ 1ಭಾಗ್ನಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಒಂದು ತಿಂಗಳ ಕಾಲ ಮೊಹಲ್ಲಾ ಸಭೆ, ಮಹಿಳೆಯರಿಗಾಗಿ ಕಾರ್ಯಕ್ರಮ, ಪುಸ್ತಕ ವಿತರಣೆ, ಮಕ್ಕಳ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಕುದ್ರೋಳಿ ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.





