ʼಮಂಗಳೂರು ಭವಿಷ್ಯದ ಡೇಟಾ ಸೆಂಟರ್ʼ: ಕೆಡಿಇಎಂ ಮತ್ತು ಎಸ್‌ಬಿಪಿಯಿಂದ ಜಂಟಿ ಅಧ್ಯಯನ ವರದಿ

ಮಂಗಳೂರು: ಭಾರತದ ಡೇಟಾ ಸೆಂಟರ್ ವಿಸ್ತರಣೆಯಲ್ಲಿ ಆರ್ಥಿಕತೆಗೆ ಬಲ ನೀಡುವಲ್ಲಿ ಕರಾವಳಿ ಭವಿಷ್ಯದ ಕೆಂದ್ರವಾಗಿ ಹೊರಹೊಮ್ಮುವಲ್ಲಿ ಮಂಗಳೂರು ಅಪಾರ ಸಾಮರ್ಥ್ಯ ಹೊಂದಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು - ಕರ್ನಾಟಕದ ಡಿಜಿಟಲ್ ಕ್ಷೇತ್ರದ ಕಾರ್ಯತಂತ್ರವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ( ಕೆಡಿಇಎಂ), ಸಿಲಿಕಾನ್ ಬೀಚ್ ಕಾರ್ಯಕ್ರಮ (ಎಸ್‌ಬಿಪಿ) ಮತ್ತು ಡೆಲಾಯ್ಟ್ ಜಂಟಿಯಾಗಿ, ‘ಇಂದಿನ ಮಂಗಳೂರು: ಭಾರತದ ಮುಂದಿನ ಸಂಭಾವ್ಯ ಡೇಟಾ ಸೆಂಟರ್ ಹಬ್ ಒಂದು ಕಾರ್ಯಸಾಧ್ಯತಾ ಅಧ್ಯಯನ’ ಎಂಬ ಶೀರ್ಷಿಕೆಯಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ.
ಬೆಂಗಳೂರು ಟೆಕ್ ಶೃಂಗಸಭೆಯ ಡೇಟಾ ಸೆಂಟರ್ ಕುರಿತಾದ ಸಭೆಯಲ್ಲಿ ಈ ವರದಿಯನ್ನು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಮತ್ತು ಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾರಿಗೆ ಸಲ್ಲಿಸಿದೆ.
ಕರಾವಳಿ ಅನುಕೂಲಗಳು, ಸ್ಪರ್ಧಾತ್ಮಕ ಭೂಮಿ ಮತ್ತು ಇಂಧನ ಆರ್ಥಿಕತೆ, ವಿಸ್ತರಿಸುತ್ತಿರುವ ಜಿಸಿಸಿ ಚಟುವಟಿಕೆ ಮತ್ತು ಬೆಳೆಯುತ್ತಿರುವ ಎಐ ಅಳವಡಿಕೆ, ಸಂಭಾವ್ಯ ಜಲಾಂತರ್ಗಾಮಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಮತ್ತು ಹಸಿರು ಇಂಧನ ಬೆನ್ನೆಲುಬಿನಿಂದ ಬೆಂಬಲಿತವಾದ ಭವಿಷ್ಯಕ್ಕೆ ಸಿದ್ಧವಾಗಿರುವ 1 ಜಿಡಬ್ಲ್ಯೂ+ ಡೇಟಾ ಸೆಂಟರ್ ಕ್ಲಸ್ಟರ್ ಅಭಿವೃದ್ಧಿ ಸೇರಿ ವಿವಿಧ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡೇಟಾ ಸೆಂಟರ್ ಕಾರ್ಯತಂತ್ರದ ಮಾರ್ಗಸೂಚಿ
2030 ರ ವೇಳೆಗೆ ರಾಷ್ಟ್ರೀಯ ಮಾರುಕಟ್ಟೆಯು 21.8 ಶತಕೋಟಿ ಅಮೆರಿಕನ್ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕವು ಭಾರತದ ಮುಂದಿನ ಹಂತದ ಡೇಟಾ ಕೇಂದ್ರ ವಿಸ್ತರಣೆಯನ್ನು ಹೇಗೆ ಮುನ್ನಡೆಸಬಹುದು ಎಂಬುದರ ಕುರಿತು ಕಾರ್ಯಸಾಧ್ಯತಾ ಅಧ್ಯಯನವು ಭವಿಷ್ಯದ ನೀಲನಕ್ಷೆಯನ್ನು ಹೊಂದಿದೆ.
ವರದಿಯ ಪ್ರಮುಖ ಅಂಶಗಳು
► ಬೆಂಗಳೂರು ಪ್ರಮುಖ ಹೈಪರ್‌ಸ್ಕೇಲ್ ಹಬ್
► ಮಂಗಳೂರು ಮತ್ತು ಹುಬ್ಬಳ್ಳಿ ಎಡ್ಜ್ ಮೂಲಸೌಕರ್ಯ, ಕಡಿಮೆ ವಿಳಂಬ ಮತ್ತು ಸಮರ್ಥ ಇಂಧನ, ಕೃತಕ ಬುದ್ಧಿಮತ್ತೆ ಸಾಮರ್ಥ್ಯಕ್ಕಾಗಿ ಪ್ರಾದೇಶಿಕವಾಗಿ ಬೆಳೆಸುವುದು.
ಈ ಚೌಕಟ್ಟಿನೊಳಗೆ, ಮಂಗಳೂರು ಭಾರತದ ಅತ್ಯಂತ ಬಲವಾದ ಮುಂದಿನ ಡೇಟಾ ಸೆಂಟರ್ ತಾಣಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.
ಪೂರಕ ಅಂಶಗಳು
►ಮುಂಬೈ/ಚೆನ್ನೈಗೆ ಹೋಲಿಸಿದರೆ ಭೂಮಿ ಮತ್ತು ವಿದ್ಯುತ್ ವೆಚ್ಚಗಳು ಕಡಿಮೆ
►ಕರಾವಳಿ ಕೈಗಾರಿಕಾ ಪರಿಸರ ವ್ಯವಸ್ಥೆ ಅನುಕೂಲಕಾರಿ
►ಡಿಜಿಟಲ್ ಪ್ರತಿಭೆಗಳ ವಿಸ್ತಾರ ಮತ್ತು ಜಿಸಿಸಿ ಉಪಸ್ಥಿತಿ
►ಕರಾವಳಿ ಕಾರಿಡಾರ್‌ನಾದ್ಯಂತ ಹೆಚ್ಚುತ್ತಿರುವ ಉದ್ಯಮ ಆದ್ಯತೆ ಮತ್ತು ಎಐ ತಂತ್ರಜ್ಞಾನ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ನಿರಂತರವಾಗಿ ಮುನ್ನಡೆಸಿದೆ ಮತ್ತು ನಾವು ಕೃತಕ ಬುದ್ಧಿಮತ್ತೆ(AI), ಡೇಟಾ ಪ್ರಾಬಲ್ಯ, ಕ್ಲೌಡ್ ಅಳವಡಿಕೆ ಮತ್ತು ಡಿಜಿಟಲ್ ಆಯಾಮಗಳಿಂದ ರೂಪುಗೊಂಡ ಯುಗವನ್ನು ಪ್ರವೇಶಿಸುತ್ತಿರುವಾಗ, ಭವಿಷ್ಯಕ್ಕೆ ಸಿದ್ಧವಾದ ಅಡಿಪಾಯಗಳನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಧ್ಯಯನದ ಒಳನೋಟಗಳು ಕರ್ನಾಟಕದ ಡಿಜಿಟಲ್ ಮೂಲಸೌಕರ್ಯ ಚೌಕಟ್ಟಿನಲ್ಲಿ ಮಂಗಳೂರು ಒಂದು ಮಾದರಿ ಆಗಲು ಅಗ್ರ ಸ್ಥಾನದಲ್ಲಿದೆ. ಕರಾವಳಿ ಅನುಕೂಲ, ಸ್ಪರ್ಧಾತ್ಮಕ ಪರಿಸರ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಪ್ರತಿಭೆ ಮತ್ತು ಕೈಗಾರಿಕಾ ವ್ಯವಸ್ಥೆಯೊಂದಿಗೆ, ಈ ಪ್ರದೇಶವು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ’
ಬಿ.ವಿ. ನಾಯ್ಡು, ಅಧ್ಯಕ್ಷ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)
‘ಮಂಗಳೂರು ಒಂದು ಬದಲಾವಣೆಯ ಹಂತದಲ್ಲಿದೆ. ಜಾಗತಿಕ ಡಿಜಿಟಲ್ ಮೂಲಸೌಕರ್ಯವು ಕೃತಕ ಬುದ್ಧಿಮತ್ತೆ, ಹೈಪರ್‌ಸ್ಕೇಲ್ ಕಂಪ್ಯೂಟಿಂಗ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಸಂಪರ್ಕದ ಕಡೆಗೆ ಬದಲಾದಂತೆ, ಪ್ರತಿಭೆ, ವೆಚ್ಚ ದಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡಬಲ್ಲ ಪ್ರದೇಶಗಳು ಮುಂದಿನ ದಶಕದ ಬೆಳವಣಿಗೆಯನ್ನು ವ್ಯಾಖ್ಯಾನಿಸುತ್ತವೆ. ಮಂಗಳೂರು ಭಾರತದ ಪ್ರಮುಖ ಕರಾವಳಿ ಪ್ರದೇಶ. ಈ ಸ್ಥಳವನ್ನು ಡೇಟಾ ಸೆಂಟರ್ ಆಗಿ ಹೇಗೆ ವಿಕಸನಗೊಳ್ಳಬಹುದು ಎಂಬುದಕ್ಕೆ ಈ ಕಾರ್ಯಸಾಧ್ಯತಾ ಅಧ್ಯಯನವು ಸ್ಪಷ್ಟ ನಿರೂಪಣೆ ನೀಡುತ್ತದೆ. ಸರಿಯಾದ ಬೆಂಬಲ ಮತ್ತು ಸಂಘಟಿತ ಅನುಷ್ಠಾನದೊಂದಿಗೆ ಹೆಚ್ಚಿನ ಡಿಜಿಟಲ್ ಉದ್ಯೋಗಗಳನ್ನು ಆಧಾರವಾಗಿಟ್ಟುಕೊಳ್ಳಬಹುದು ಮತ್ತು ಭಾರತಕ್ಕಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಿಲಿಕಾನ್ ಬೀಚ್ ಆಗಿ ಮಂಗಳೂರನ್ನು ರಚಿಸಬಹುದು’
ರೋಹಿತ್ ಭಟ್, ಸಿಲಿಕಾನ್ ಬೀಚ್ ಕಾರ್ಯಕ್ರಮದ ಸ್ಥಾಪಕ ಸದಸ್ಯ, ಐಟಿ ಧುರೀಣ







