ಮಂಗಳೂರು | ಬ್ಯಾರಿ ಅಕಾಡಮಿಯಿಂದ ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಮಂಗಳೂರು, ನ.28: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.14ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳೂರು ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಭಾಷಾಂತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಭಾಷಣ ಸ್ಪರ್ಧೆ ಏರ್ಪಡಿಸಿದೆ.
ಭಾಷಾಂತರ (ಕನ್ನಡದಿಂದ ಬ್ಯಾರಿಗೆ ಅಥವಾ ಬ್ಯಾರಿಯಿಂದ ಕನ್ನಡಕ್ಕೆ) ಮತ್ತು ವಿಷಯಾಧಾರಿತ ಭಾಷಣ ಸ್ಪರ್ಧೆಯ ವಿಜೇತರಿಗೆ 3,000 ರೂ., 2,000 ರೂ. ಮತ್ತು 1,000 ರೂ. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಬ್ಯಾರಿ ಅಕಾಡಮಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧೆಯು ಡಿ.13ರಂದು ಅಪರಾಹ್ನ 3ಕ್ಕೆ ಸೂರಲ್ಪಾಡಿ ಮಸೀದಿ ಬಳಿಯ ಅಲ್ ಖೈರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಭಾಷಾಂತರ ಸ್ಪರ್ಧೆಗೆ 150 ಪದಗಳ ಬರಹಕ್ಕೆ 30 ನಿಮಿಷ ಕಾಲಾವಕಾಶ ನೀಡಲಾಗುವುದು. ಭಾಷಣಕ್ಕೆ ನೀಡಲಾಗುವ ವಿಷಯಗಳನ್ನು ಆಯ್ಕೆ ಮಾಡಿ ತಯಾರಿಗೆ 30 ನಿಮಿಷ ಮತ್ತು ಭಾಷಣಕ್ಕೆ 5 ನಿಮಿಷ ಕಾಲಾವಕಾಶ ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗೆ ಡಿ.10ರ ಒಳಗೆ ಸಲೀಂ ಹಂಡೇಲ್ (ಮೊ.ಸಂ.9902194315) ಅಥವಾ ಖಲಂದರ್ ಬೀವಿ (ಮೊ.ಸಂ. 8197879889) ಅವರನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







