ಮಂಗಳೂರು : ಮಾದಕ ವಸ್ತು ಸೇವನೆ ಆರೋಪ; ಮೂವರ ಬಂಧನ
ಮಂಗಳೂರು: ನಗರದ ಕೋಡಿಕಲ್ ಬಳಿ ಪರಿಸರದಲ್ಲಿ ಮಾದಕ ಸೇವನೆ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮೂಲತಃ ಧಾರವಾಡ ತೇಗೂರು ನಿವಾಸಿ, ಪ್ರಸ್ತುತ ಕುದ್ರೋಳಿ ನಡುಪಳ್ಳಿ ನಿವಾಸಿ ಇಮ್ರಾನ್ (22), ಅಡ್ಯಾರ್ ಪದವು ನಿವಾಸಿ ಸಾದಿಕ್ (36), ಉಳ್ಳಾಲ ಕಿನ್ಯಾ ನಿವಾಸಿ ಜವಾಝ್ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ವಿವರ: ನಗರದ ಸಿಸಿಬಿ ಘಟಕದ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಮಪೂಜಾರಿಯವರು ಆ.11ರಂದು ಸಂಜೆ 4:00ಗಂಟೆಗೆ ಕೋಡಿಕಲ್ ಬಳಿ ಪರಿಸರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೂವರು ಆರೋಪಿಗಳು ಕೋಡಿಕಲ್ ಪರಿಸರದಲ್ಲಿದ್ದು, ಪೊಲೀಸ್ ಸಿಬ್ಬಂದಿಯನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಮಾದಕವಸ್ತುಗಳನ್ನು ಸೇವನೆ ಮಾಡಿರುವ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
Next Story





