ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಮಂಗಳೂರು, ನ.26: ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಗರದ ಸೆನ್ ಕ್ರೈಂ ಠಾಣೆಯ ಪೊಲೀಸರು ಗಸ್ತು ನಿರತರಾಗಿದ್ದಾಗ ಕಣ್ಣೂರು ರೈಲ್ವೆ ಟ್ರ್ಯಾಕ್ ಬಳಿ ಆರೋಪಿ ಮುಹಮ್ಮದ್ ಅಫ್ರೀದ್ (23) ಮತ್ತು ಕಣ್ಣೂರು ಚೆಕ್ಪೋಸ್ಟ್ ಬಳಿ ಮುಝಂಬಿಲ್ (23) ಎಂಬವರನ್ನು ಬಂಧಿಸಲಾಗಿದೆ.
Next Story





