ಮಂಗಳೂರು | ಗಾಂಜಾ ಸೇವನೆ ಮಾಡಿದ ಆರೋಪ: ಇಬ್ಬರ ಸೆರೆ

ಸಾಂದರ್ಭಿಕ ಚಿತ್ರ
ಮಂಗಳೂರು, ನ.28: ಗಾಂಜಾ ಸೇವನೆ ಮಾಡಿದ ಆರೋಪಕ್ಕೆ ಸಂಬಂದಿಸಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಬೆಳಗ್ಗೆ ಕುದ್ರೋಳಿ ಬಳಿ ಕರ್ತವ್ಯ ನಿರತ ಪೊಲೀಸರು ಸುರತ್ಕಲ್ ಕೃಷ್ಣಾಪುರ 8ನೇ ಬ್ಲಾಕ್ನ ಜೈನು ರಾಬಿ ಯಾನೆ ಜೈನುಲ್ಲಾ ಅಬೀದ್ ಹಾಗೂ ಸಂಜೆ ಕುದ್ರೋಳಿ ಶಾಲೆ ಬಳಿಯ ನಿವಾಸಿ ಮುಹಮ್ಮದ್ ಫಾರೂಕ್ ಎಂಬವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
Next Story





