Mangaluru| ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

ಮಂಗಳೂರು: ರಾ.ಹೆ.75ರ ಅಡ್ಯಾರ್-ವಳಚ್ಚಿಲ್ ಮಧ್ಯೆ ಇರುವ ಸೋಮನಾಥ ಕಟ್ಟೆಯ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಡ್ಯಾರ್ ಕಣ್ಣೂರು ನಿವಾಸಿ ಇಕ್ಬಾಲ್ (42) ಎಂಬವರು ಮೃತರಾಗಿದ್ದಾರೆ.
ಇಕ್ಬಾಲ್ ಅವರು ದ್ವಿಚಕ್ರ ವಾಹನದಲ್ಲಿ ವಳಚ್ಚಿಲ್‌ನಿಂದ ಸೋಮನಾಥ ಕಟ್ಟೆ ಬಳಿ ಬರುವಾಗ ಪಂಪ್‌ವೆಲ್‌ನಿಂದ ವಳಚ್ಚಿಲ್‌ನತ್ತ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಇಕ್ಬಾಲ್‌ರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕಲ್ಲಾಪು ಗ್ಲೋಬಲ್ ಮಾರ್ಕೆಟ್‌ನಲ್ಲಿ ದುಡಿಯುತ್ತಿದ್ದ ಇಕ್ಬಾಲ್ ಅವರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story





