Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ...

ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್; ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ29 March 2025 5:20 PM IST
share
ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್; ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯವು ತನ್ನ ಘಟಿಕೋತ್ಸವದ ಸಂದರ್ಭ ಮೂವರು ಶ್ರೀಮಂತ ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿರುವುದನ್ನು ಮಂಗಳೂರಿನ ಪ್ರಗತಿಪರ ಚಿಂತಕರು ಬಲವಾಗಿ ಖಂಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ವಿದ್ಯಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿ ವಿ ಕಳೆದ ಒಂದು ದಶಕದ ಹಿಂದಿನವರೆಗೂ ರಾಜ್ಯದ ಶೈಕ್ಷಣಿಕ ಹಾಗೂ ಬೌದ್ದಿಕ ವಲಯದಲ್ಲಿ ಘನತೆಯ ಸ್ಥಾನಮಾನವನ್ನು ಹೊಂದಿತ್ತು. ಹಲವು ಖ್ಯಾತನಾಮರು ಈ ವಿ ವಿಯ ಕುಲಪತಿಗಳಾಗಿ, ವಿವಿಧ ವಿಭಾಗಗಳ ಜವಾಬ್ದಾರಿ ಹೊತ್ತು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಹೆಸರಾಂತ ಪ್ರಾಧ್ಯಾಪಕರು, ಇತಿಹಾಸಕಾರರು ವಿ ವಿ ಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಮಹತ್ವದ ಸಂಶೋಧನೆಗಳು ಮಂಗಳೂರು ವಿ ವಿ ಯಿಂದ ನಡೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಕೋಮುವಾದಿ, ಜಾತಿವಾದಿ ಶಕ್ತಿಗಳಿಗೆ ಮನ್ನಣೆ, ಹಣವಂತರ ಮುಂದೆ ತಲೆಬಾಗುವ ಘನತೆಯಿಲ್ಲದ ನಡವಳಿಕೆಯಿಂದ ಹೆಸರು ಕೆಡಿಸಿಕೊಂಡಿದೆ. ಕಳೆದ ಐದಾರು ವರ್ಷಗಳಿಂದ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಕೇವಲ ಶ್ರೀಮಂತಿಕೆಯನ್ನು ಅರ್ಹತೆಯಾಗಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನಿಸುವ ತೀರಾ ಕೆಟ್ಟದಾದ ಪರಂಪರೆಯನ್ನು ಅಳವಡಿಸಿಕೊಂಡಿದೆ. ಇದು ಕಾಸು ಪಡೆದು ಗೌರವ ಡಾಕ್ಟರೇಟ್ ನೀಡುವ ನಕಲಿ ವಿ ವಿ ಗಳ ಪರಿಪಾಠದ ನಕಲಿನಂತೆ ಜನ ಸಾಮಾನ್ಯರಿಗೆ ಕಂಡರೆ ಅಚ್ಚರಿ ಇಲ್ಲ. ಅದರಲ್ಲೂ, ಕಳೆದ ಎರಡು ವರ್ಷಗಳಿಂದ ಹೆಚ್ಚು ಸಂಪತ್ತು ಹೊಂದಿರುವುದನ್ನೆ ಅರ್ಹತೆಯನ್ನಾಗಿಸಿ ತಲಾ ಮೂರು ಜನ ದೊಡ್ಡ ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ನಿರ್ಲಜ್ಜ ನಡೆಯನ್ನು ಅನುಸರಿಸುತ್ತಿದೆ. ಈ ರೀತಿ ಗೌರವ ಡಾಕ್ಟರೇಟ್ ಪಡೆದ ಕೆಲವರ ಕುರಿತು ಸಮಾಜದಲ್ಲಿ ಕನಿಷ್ಟ ಒಳ್ಳೆಯ ಅಭಿಪ್ರಾಯಗಳೂ ಇಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಇದೇ ರೀತಿ ಮೂರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರಧಾನಿಸಿದ ಸಂದರ್ಭ ವಿ ವಿ ನಡೆಗೆ ನಾಗರಿಕ ವಲಯದಿಂದ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಆದರೂ ತಿದ್ದಿಕೊಳ್ಳದ ವಿ ವಿ ಆಡಳಿತ ಈ ಬಾರಿಯೂ ತನ್ನ ಅದೇ ಚಾಳಿಯನ್ನು ಮುಂದುವರಿಸಿದೆ. ಆ ಮೂಲಕ ತನ್ನದು ಅಧಿಕಾರಸ್ಥ ರಾಜಕಾರಣಿಗಳಿಗೆ, ಶ್ರೀಮಂತ ಉದ್ಯಮಿಗಳಿಗೆ ಬಹು ಪರಾಕ್ ಹಾಕುವ ವಿದೂಷಕ ಮನಸ್ಥಿತಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಗೌರವ ಡಾಕ್ಟರೇಟ್ ನೀಡುವುದು ವಿಶ್ವ ವಿದ್ಯಾನಿಲಯದ ಕರ್ತವ್ಯದ ಭಾಗ ಅಲ್ಲ. ಪ್ರತಿ ವರ್ಷ ಗೌರವ ಡಾಕ್ಟರೇಟ್ ನೀಡುವ ಪರಿಪಾಠ ಬೆಳೆಸಿಕೊಳ್ಳುವ ಅಗತ್ಯವೂ ಇಲ್ಲ. ವಿಶೇಷ ಸಾಧಕರಿಗೆ ವಿಶೇಷ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡುವುದಾದರೆ ಅದಕ್ಕೆ ಒಂದು ಅರ್ಥ ಇರುತ್ತದೆ, ಗೌರವವೂ ಇರುತ್ತದೆ. ದೊಡ್ಡ ಉದ್ಯಮಿಗಳು, ಶ್ರೀಮಂತರ ಹೆಸರುಗಳನ್ನು ಪಟ್ಟಿ ಮಾಡಿ ಪ್ರತಿ ವರ್ಷ ಅದರಲ್ಲಿ ಮೂರು ಜನರನ್ನು ಗೌರವ ಪದವಿಗೆ ಆಯ್ಕೆ ಮಾಡುವುದು ವಿ ವಿಯ ಘನತೆ, ಗೌರವಕ್ಕೆ ಮಾತ್ರ ಅಲ್ಲ, ವರ್ಷಗಳ ಕಾಲ ಕ್ಷೇತ್ರ ಕಾರ್ಯ ಮಾಡಿ, ಹಗಲು ರಾತ್ರಿ ಕಷ್ಟ ಪಟ್ಟು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆಯುವ ಸಾಧಕರಿಗೆ ಮಾಡುವ ಅವಮಾನವೂ ಹೌದು. ಮಂಗಳೂರು ವಿ ವಿ ತನ್ನ ಈ ಚಾಳಿಯನ್ನು ಈಗಲಾದರು ಬದಲಾಯಿಸಿಕೊಳ್ಳಬೇಕು, ಸಂಪತ್ತಿನ ಮಾನದಂಡದಲ್ಲಿ ನೀಡಿರುವ ಗೌರವ ಡಾಕ್ಟರೇಟ್ ಪದವಿಗಳನ್ನು ವಾಪಾಸು ಪಡೆಯಬೇಕು ಆ ಮೂಲಕ ವಿ ವಿ ಯ ಗೌರವವನ್ನು ಉಳಿಸಬೇಕು ಎಂದು ಚಿಂತಕರ ವೇದಿಕೆಯ ಮೂಲಕ ನೀಡಿರುವ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಪ್ರೊ. ನರೇಂದ್ರ ನಾಯಕ್ ( ಮಾಜಿ ಸದಸ್ಯರು (ಚುನಾಯಿತ) ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮಂಗಳೂರು ವಿ ವಿ)

ವಾಸುದೇವ ಉಚ್ಚಿಲ (ವಿಚಾರವಾದಿಗಳು, ಮಂಗಳೂರು)

ಎಂ ದೇವದಾಸ್ (ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ)

ಡಾ. ಕೃಷ್ಣಪ್ಪ ಕೊಂಚಾಡಿ (ಬರಹಗಾರರು, ಮಂಗಳೂರು)

ಶ್ಯಾಮಸುಂದರ ರಾವ್ (ಚಿಂತಕರು)

ಪ್ರಭಾಕರ ಕಾಪಿಕಾಡ್ (ರಂಗ ಕಲಾವಿದರು)

ಕೆ. ಯಾದವ ಶೆಟ್ಟಿ (ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತ ಸಂಘ)

ಎರಿಕ್ ಲೋಬೊ (ವಿಚಾರವಾದಿಗಳು)

ಸಂತೋಷ್ ಬಜಾಲ್ (ಜಿಲ್ಲಾ ಕಾರ್ಯದರ್ಶಿ, ಡಿವೈಎಫ್ಐ ದಕ್ಷಿಣ ಕನ್ನಡ)

ಮನೋಜ್ ವಾಮಂಜೂರು (ಕಾರ್ಯದರ್ಶಿ, ಸಮುದಾಯ ಮಂಗಳೂರು)

ಪ್ರಗತಿಪರ ಚಿಂತಕರ ವೇದಿಕೆ, ಮಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X