ಮಂಗಳೂರು | ನ.29ರಂದು ವಿಶ್ವ ಮಧುಮೇಹ ರೋಗ ದಿನಾಚರಣೆ

ಸಾಂದರ್ಭಿಕ ಚಿತ್ರ | PC : freepik.com
ಮಂಗಳೂರು, ನ.25: ನಗರದ ನಾಟೆಕಲ್ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ‘ವಿಶ್ವ ಮಧುಮೇಹ ರೋಗ ದಿನಾಚರಣೆ’ ನ.29ರಂದು ಬೆ. 10:00 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಸಂಸ್ಥೆಯ ನಿರಂತರ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಲಿರುವರು.
ಖ್ಯಾತ ಮತ್ತು ನುರಿತ ಮಧುಮೇಹ ರೋಗ ಶಾಸ್ತ್ರ ತಜ್ಞರು ಹಾಗೂ ಚಿಕಿತ್ಸಕರಾದ ಖ್ಯಾತ ವೈದ್ಯಕೀಯ ಶಾಸ್ತ್ರತಜ್ಞರು ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆ ಬಗ್ಗೆ ಜಾಗೃತಿ ಮತ್ತು ಮಾಹಿತಿ ಅಭಿಯಾನ ಹಾಗೂ ಕಾರಣಗಳು ರೋಗದ ವಿವಿಧ ಲಕ್ಷಣಗಳು, ದೇಹದ ವಿವಿಧ ಅಂಗಾಂಗಗಳಿಗೆ ಬೀರುವ ಪರಿಣಾಮಗಳು ಹಾಗೂ ವಿವಿಧ ಚಿಕಿತ್ಸಾ ಉಪಾಯ ಪರಿಹಾರ ಕ್ರಮಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಲಿರುವರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್, ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ. ಶಹನವಾಜ್ ಮಣಿಪಾಡಿ, ವೈದ್ಯಕೀಯ ಅಧೀಕ್ಷಕ ಡಾ.ಅಂಜನ್ ಕುಮಾರ್, ಮುಖ್ಯ ಸಲಹೆಗಾರ ಡಾ. ಮುಹಮ್ಮದ್ ಇಸ್ಮಾಯಿಲ್ ಮತ್ತು ಸಲಹಾ ಸಮಿತಿಯ ಸದಸ್ಯ ಡಾ. ಎಂ.ವಿ. ಪ್ರಭು, ಮುಖ್ಯ ಆಡಳಿತ ಅಧಿಕಾರಿಯಾದ ಡಾ. ರೋಹನ್ ಮೋನಿಸ್ ಭಾಗವಹಿಸಲಿರುವರು.
ವಿವಿಧ ವೈದ್ಯಕೀಯ ಸಂಸ್ಥೆಗಳನ್ನು ಪ್ರತಿನಿಧಿಸುವ 250 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಮಾಹಿತಿ ನೀಡಿದ್ದಾರೆ.







