ಮಂಜನಾಡಿ: ಬುಖಾರಿ ಯಂಗ್ಮೆನ್ಸ್ ಅಸೋಸಿಯೇಷನ್ ಮಹಾಸಭೆ; ಅಧ್ಯಕ್ಷರಾಗಿ ಅಬ್ದುಲ್ ಸಮದ್ ಬಿ.ಎಮ್ ಆಯ್ಕೆ

ಅಬ್ದುಲ್ ಸಮದ್ ಬಿ.ಎಮ್
ಮಂಜನಾಡಿ: ಬುಖಾರಿ ಯಂಗ್ಮೆನ್ಸ್ ಅಸೋಸಿಯೇಷನ್, ಮಂಜನಾಡಿ ಇದರ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷ ಇ.ಎಂ. ಮೊಯ್ದಿನ್ ಕುಂಞಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಲೆಕ್ಕಪತ್ರವನ್ನು ಮಂಡಿಸಿದ ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಇ.ಎಂ. ಮೊಯ್ದಿನ್ ಕುಂಞಿ, ಅಧ್ಯಕ್ಷರಾಗಿ ಅಬ್ದುಲ್ ಸಮದ್ ಬಿ.ಎಂ., ಉಪಾಧ್ಯಕ್ಷರಾಗಿ ಮುಹಮ್ಮದ್ ಪಿ.ಎಸ್. ಹಾಗೂ ಹಾರೀಸ್ ಡಿ.ಎಂ. ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಪಿ.ಎಂ., ಕಾರ್ಯದರ್ಶಿಗಳಾಗಿ ಇಸ್ಮಾಯೀಲ್ ಶಾಫಿ ಎಂ. ಮತ್ತು ನೌಶಾದ್ ಮಂಗಳಾಂತಿ, ಕೋಶಾಧಿಕಾರಿಯಾಗಿ ರಹೀಝ್ ಮಂಗಳಾಂತಿ, ಲೆಕ್ಕ ಪರಿಶೋಧಕರಾಗಿ ಇಬ್ರಾಹೀಮ್ ಪಿ.ಎಂ. ಅವರನ್ನು ಆಯ್ಕೆ ಮಾಡಲಾಯಿತು.
ಇತರ ನಾಲ್ವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
Next Story





