ಮಂಜನಾಡಿ ಉರೂಸ್ ಸಮಾರೋಪ

ಮಂಜನಾಡಿ: ಒಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕೆ ನಮ್ಮನ್ನು ಬಳಕೆ ಮಾಡಲು ನಾವು ಅವಕಾಶ ನೀಡಬಾರದು. ನಾವು ಶಾಂತಿ ಸೌಹಾರ್ದತೆ ಯಿಂದ ಬದುಕಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಮಂಗಳೂರು ವಿವಿ ಉಪಕುಲಪತಿ ಪಿ.ಎಲ್ ಧರ್ಮ ಹೇಳಿದರು.
ಅವರು ಮಂಜನಾಡಿ ಉರೂಸ್ ಸಮಾರೋಪ ಹಾಗೂ ಭಾವೈಕ್ಯತಾ ಸಂಗಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮ ಹಲವು ಇದ್ದರೂ ಸಮಾಜದಲ್ಲಿ ಯಾವುದೇ ಭಿನ್ನತೆ ಇಲ್ಲ. ಧಾರ್ಮಿಕ ಕಾರ್ಯಕ್ರಮಗಳು ಸೌಹಾರ್ದತೆಯಿಂದ ನಡೆಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಇದಕ್ಕೆ ನಾವು ಒತ್ತು ನೀಡಬೇಕು ಎಂದು ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಳ ಹೇಳಿದರು.
ಅಸಯ್ಯಿದ್ ಇಬ್ರಾಹೀಮ್ ಖಲೀಲ್ ತಂಙಳ್ ಕಡಲುಂಡಿ ದುಆ ಆಶೀರ್ವಚನ ನೀಡಿದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಸಮಾರೋಪ ಉಪನ್ಯಾಸ ನೀಡಿದರು.ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಜಾಯ್ ಸೆಬಾಸ್ಟಿಯನ್ ಮಾತನಾಡಿದರು.
ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಕೊಣಾಜೆ ಸಬ್ ಇನ್ಸ್ಪೆಕ್ಟರ್ ನಾಗರಾಜ್, ಯು.ಟಿ ಫರೀದ್, ಹೈದರ್ ಪರ್ತಿಪ್ಪಾಡಿ, ವಕ್ಫ್ ಅಧಿಕಾರಿ ಅಬೂಬಕ್ಕರ್, ಪ್ರಶಾಂತ್ ಕಾಜವ, ಉದ್ಯಮಿ ರಾಮಚಂದ್ರ ಪಿಲಾರ್, ಮುರಳೀಧರ ಶೆಟ್ಟಿ ಮೋರ್ಲ, ತಾ.ಪಂ.ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು , ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮೊಹಮ್ಮದ್ ಮಸ್‌ಊದ್ ಸಅದಿ, ರಿಯಾಝ್ ಪಾಷಾ ಮೈಸೂರು, ಕೆ.ಎನ್.ರಾಘವೇಂದ್ರ ಮೈಸೂರು, ಮಂಜನಾಡಿ ಜಮಾಅತ್ ಉಪಾಧ್ಯಕ್ಷರಾದ ಆಲಿ ಕುಂಞಿ ಪಾರೆ, ಮುನೀರ್ ಬಾವ, ಮೊಯಿದಿನ್ ಕುಟ್ಟಿ ಪರ್ತಿಪ್ಪಾಡಿ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಹಮೀದ್ ಆರಂಗಡಿ, ಬಾಪ ಕುಂಞಿ, ಕುಂಞಿ ಬಾವ ಕಟ್ಟೆಮಾರ್, ನರಿಂಗಾನ ಗ್ರಾ.ಪಂ.ಅಧ್ಯಕ್ಷ ನವಾಝ್ ನರಿಂಗಾನ, ಅತ್ತಾವುಲ್ಲ ಪರ್ತಿಪ್ಪಾಡಿ,ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ರಹ್ಮಾನ್ ರಝ್ವಿ, ಉಪ ಸಂಚಾಲಕ ಇಬ್ರಾಹಿಂ ಅಹ್ಸನಿ, ಮೊಯ್ದಿನ್ ಹಾಜಿ ಬಸರ, ಕೆಎಂಕೆ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ , ವಂದಿಸಿದರು.







