ಮಂಜನಾಡಿ: ಸುನ್ನೀ ಉಲಮಾ ಸಮ್ಮೇಳನಕ್ಕೆ ಇಂದು ಎ.ಪಿ.ಉಸ್ತಾದ್ ಚಾಲನೆ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಉಲಮಾ ಒಕ್ಕೂಟದ ಆಶ್ರಯದಲ್ಲಿ ನಡೆಯಲಿರುವ ಉಲಮಾ ಸಮ್ಮೇಳನವು ಜ.17ರಂದು ಅಪರಾಹ್ನ ಮಂಜನಾಡಿಯ ಅಲ್ ಮದೀನಾ ವಿದ್ಯಾಸಂಸ್ಥೆಯಲ್ಲಿ ಆರಂಭಗೊಳ್ಳಲಿದೆ. ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಮಖಾಂ ಝಿಯಾರತ್ ಬಳಿಕ ಅಪರಾಹ್ನ 3:30ಕ್ಕೆ ಸೈಯದ್ ಕಿಲ್ಲೂರು ತಂಙಳ್ ಧ್ವಜಾರೋಹಣ ಮಾಡುವರು.
ಸಂಜೆ 4 ಗಂಟೆಗೆ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಉದ್ಘಾಟಿಸಲಿದ್ದಾರೆ.
ಎಸ್.ಎಂ.ಎ.ರಾಜ್ಯಾಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ಪ್ರಾರ್ಥನೆ ನಡೆಸಲಿದ್ದು, ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯಾಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್, ಎಸ್ ವೈ ಎಸ್ ರಾಜ್ಯಾಧ್ಯಕ್ಷ, ಹಫೀಳ್ ಸಅದಿ, ಎಸ್ ಜೆ ಎಂ ರಾಜ್ಯಾಧ್ಯಕ್ಷ, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ, ಅಲ್ ಮದೀನಾ ನಿರ್ದೇಶಕ ಅಬ್ದುಲ್ ಖಾದಿರ್ ಸಖಾಫಿ ಶುಭ ಹಾರೈಸುವರು.
ಸಂಜೆ 7 ಗಂಟೆಗೆ 'ಆರ್ಥಿಕ ವ್ಯವಹಾರಗಳ ಸರಿ ತಪ್ಪುಗಳು' ಎಂಬ ವಿಚಾರವಾಗಿ ವಿದ್ವಾಂಸರಾದ ಅಬ್ದುಲ್ ಜಲೀಲ್ ಸಖಾಫಿ, ಚೆರುಶ್ಶೋಲ ಹಾಗೂ 8:30ಕ್ಕೆ 'ಇತಿಹಾಸದ ಅಧ್ಯಯನಕ್ಕೊಂದು ಮುನ್ನುಡಿ ಎಂಬ ವಿಷಯದಲ್ಲಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಉಪನ್ಯಾಸ ನೀಡಲಿದ್ದಾರೆ.
ಜ. 18ರಂದು ಮುಂಜಾನೆ 6.30ಕ್ಕೆ 'ವಿದ್ವಾಂಸರು ಹೀಗಿರಬೇಕು' ಎಂಬ ವಿಷಯದಲ್ಲಿ ಮುಹಮ್ಮದ್ ಸಅದಿ ವಳವೂರು ಹಾಗೂ 'ನಾಸ್ತಿಕತೆಯ ಮೌಢ್ಯತೆ' ಬಗ್ಗೆ ಇಬ್ರಾಹೀಂ ಸಖಾಫಿ ಪುಝಕಾಟಿರಿ ಉಪನ್ಯಾಸ ನೀಡುವರು. ಬೆಳಗ್ಗೆ 9:30ಕ್ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ 'ಅಶ್ಅರಿ-ಮಾತುರೀದಿ' ಬಗ್ಗೆ, ಪೂ.11ಕ್ಕೆ ಶಾಫಿ ಸಖಾಫಿ ಮುಂಡಂಬ್ರ ಅವರು 'ಬೋಧನೆಯ ಹೊಸ ಆಯಾಮಗಳು' ಬಗ್ಗೆ ಉಪನ್ಯಾಸ ನೀಡುವರು.
ಅಪರಾಹ್ನ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮ್ಮೇಳನವನ್ನು ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಅಸ್ಸೈಯದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಸ್ಸೈಯದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಮುಖ್ಯ ಅತಿಥಿಗಳಾಗಿರುವರು.
ಸೈಯದ್ ಸಾದಾತ್ ತಂಙಳ್ ಪ್ರಾರ್ಥನೆ ನಡೆಸಲಿದ್ದು, ಕೆ ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಮುನ್ನುಡಿ ಭಾಷಣ ಮಾಡಲಿದ್ದಾರೆ.
ಅಬ್ದುರ್ರಝಾಖ್ ಮುಸ್ಲಿಯಾರ್ ವಳವೂರು, ಖಾಸಿಂ ಮದನಿ ಕರಾಯ, ಅಬೂ ಸುಫ್ಯಾನ್ ಇಬ್ರಾಹೀಂ ಮದನಿ, ಜಿಎಂ ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಡಾ. ಅಬ್ದುರ್ರಶೀದ್ ಝೈನಿ, ಶಾಫಿ ಸಅದಿ ಬೆಂಗಳೂರು, ಡಿಕೆ ಉಮರ್ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ ಭಾಗವಹಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂರು ಸಾವಿರದಷ್ಟು ಉಲಮಾ ಪ್ರತಿನಿಧಿಗಳು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.