ಜ.26ರಿಂದ ಕಾರ್ಮಿಕ ಸಂಹಿತೆಗಳ ವಿರುದ್ಧ ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ

ಮಂಗಳೂರು, ಜ.23: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ ಮತ್ತು ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆ.12ರಂದು ರೈತ ಕಾರ್ಮಿಕರ ನೇತೃತ್ವ ದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜ.26ರಿಂದ 29ರವರೆಗೆ ದ.ಕ.ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ.
ಜ.26ರಂದು ಬೆಳ್ತಂಗಡಿ, ಜ.27ರಂದು ಮೂಡುಬಿದಿರೆ, ಜ.28ರಂದು ಮುಲ್ಕಿಯಿಂದ ಪಾದಯಾತ್ರೆ ಹೊರಡಲಿದೆ. ಜ.29ರಂದು ಬೆಳಗ್ಗೆ 10ಕ್ಕೆ ಈ ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಕ್ಲಾಕ್ ಟವರ್ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.
Next Story





