Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಾನವೀಯ ಮೌಲ್ಯದಿಂದ ಬದುಕಿನ ಸಾರ್ಥಕ್ಯ:...

ಮಾನವೀಯ ಮೌಲ್ಯದಿಂದ ಬದುಕಿನ ಸಾರ್ಥಕ್ಯ: ಮಾಣಿಲ ಸ್ವಾಮೀಜಿ

ಜಮಾಅತೆ ಇಸ್ಲಾಮೀ ಹಿಂದ್‍ನ ಸೀರತ್ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ18 Nov 2023 9:07 PM IST
share
ಮಾನವೀಯ ಮೌಲ್ಯದಿಂದ ಬದುಕಿನ ಸಾರ್ಥಕ್ಯ: ಮಾಣಿಲ ಸ್ವಾಮೀಜಿ

ಪುತ್ತೂರು: ಮಾನವೀಯ ಮೌಲ್ಯದ ಜೊತೆಯಲ್ಲಿ ಈ ಬದುಕನ್ನು ಯಾವ ರೀತಿ ಸಾರ್ಥಕ್ಯ ಗೊಳಿಸಬಹುದು ಎಂಬುದನ್ನು ಲೋಕಕ್ಕೆ ಪ್ರವಾದಿ ಪೈಗಂಬರರು, ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದರು ಸೇರಿದಂತೆ ದಾರ್ಶನಿಕರು ವಿಶ್ವಮಾನವ ಕುಲಕೋಟಿಗೆ ತಿಳಿಸಿ ಕೊಟ್ಟಿದ್ದಾರೆ. ನಾವೆಲ್ಲರೂ ಅದನ್ನು ಪಾಲಿಸುವ ಕೆಲಸ ಮಾಡಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ವತಿಯಿಂದ ಶುಕ್ರವಾರ ರಾತ್ರಿ ಪುತ್ತೂರಿನ ಟೌನ್‍ಹಾಲ್‍ನಲ್ಲಿ ನಡೆದ `ದೇಶದ ಹಿತಚಿಂತನೆ' ಎಂಬ ಶೀರ್ಷಿಕೆಯಲ್ಲಿ ಸೀರತ್ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಸಮಾಜ ಅಜ್ಞಾನದಲ್ಲಿದ್ದ ಕಾಲದಲ್ಲಿ ಎಲ್ಲಾ ಪ್ರದೇಶಗಳನ್ನು ಸಂಚರಿಸಿ ಎಲ್ಲ ರಿಗೂ ಶಾಂತಿ ಮತ್ತು ಸೌಹಾರ್ದತೆಯನ್ನು ಸಂದೇಶವನ್ನು ನೀಡಿದ್ದರು. ಅಸುರ ಪ್ರವೃತಿ ಆ ಕಾಲದಲ್ಲೂ ಇತ್ತು. ಅದನ್ನೆಲ್ಲ ಮೀರಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವ ಕಾರ್ಯ ನಡೆಸಿದ್ದರು. ಜೀವನಮೌಲ್ಯವನ್ನು ಪಾಲಿಸುವ ಸಂದೇಶ ನೀಡಿದರು. ನಾರಾಯಣ ಗುರುಗಳು ಜಗತ್ತು ಅಜ್ಞಾನದ ಅಂದಾಕರದಲ್ಲಿ ತೊಡಗಿದ್ದಾಗ, ಶೋಷಿತ ಸಮಾಜಕ್ಕೆ ವಿಶ್ವ ಶಾಂತಿ ತೋರಿಸಿದರು. ಸ್ವಾಮಿ ವಿವೇಕಾನಂದರು ಇಡಿ ವಿಶ್ವವನ್ನೇ ಸಹೋದರ ಸಹೋದರಿಯರೆಂದು ಬಾತೃತ್ವದ ಸಂದೇಶ ಕೊಟ್ಟರು. ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ನಿರ್ಮಿಸಿ ಪ್ರತಿಯೊಬ್ಬ ಮಾನವ ಕಲ್ಯಾಣಕ್ಕಾಗಿ, ಪ್ರತಿಯೊಬ್ಬರಿಗೂ ಬದುಕಲು ಅವಕಾಶ ಕೊಟ್ಟರು. ಇವರೆಲ್ಲರು ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇವತ್ತು ಜಗತ್ತಿನಲ್ಲಿ ಎಷ್ಟೋ ಹಿಂಸೆಗಳು ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಜಮಾಅತೇ ಇಸ್ಲಾಂ ಹಿಂದ್ ಸಂಘಟನೆಯಿಂದ ನಡೆಯುತ್ತಿ ರುವ ಇಂತಹ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಉತ್ತಮ ವಿಚಾರ ಎಂದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಉಪನ್ಯಾಸ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಅವರು ಪ್ರವಾದಿಗಳು ಸ್ಥಿರವಾದ ಮೌಲ್ಯಗಳ ಬಗ್ಗೆ ನಿಷ್ಠೆ ಇರುವ ಸಮಾಜದ ನಿರ್ಮಾಣ ಮಾಡಿದರು. ಪ್ರವಾದಿಯವರು 6ನೇ ಶತಮಾನದಲ್ಲೇ ಮದ್ಯಮುಕ್ತ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಜಗತ್ತಿನಲ್ಲಿ ಪ್ರಪ್ರಥಮವಾಗಿ ಲಿಖಿತ ಸಂವಿಧಾನ ಪ್ರವಾದಿ ಮುಹಮ್ಮದರ ಮದೀನ ಚಾಪ್ಟರ್ ಆಗಿತ್ತು. ಅದರಲ್ಲಿ ಮನುಷ್ಯನ ಸ್ವಾತಂತ್ರ್ಯ ಹಕ್ಕುಗಳಿಗೆ ಆದ್ಯತೆ ಕೊಡಲಾಗಿದೆ. ಸುಮಾರು 52 ಪರಿಛೇದಗಳು ಮದೀನ ಚಾಪ್ಟರ್‍ನಲ್ಲಿದೆ. ಒಂದೊಂದು ಧರ್ಮವನ್ನು ಒಬ್ಬೊಬ್ಬ ದೇವರು ಸೃಷ್ಟಿಸಿದ್ದಲ್ಲ. ಈ ಮಾನವ ಕುಲ ಒಂದೇ ದೇವರ ಸೃಷ್ಟಿಯಾಗಿದೆ. ಹಾಗಾಗಿ ಜಗತ್ತಿನ ಎಲ್ಲರು ಸಮಾನರು. ಆಧುನಿಕ ಜಗತ್ತಿನಲ್ಲಿ ಯಾವುದನ್ನು ಮಾನವ ಹಕ್ಕಕುಗಳೆಂದು ಪ್ರತಿಪಾದಿಸುತ್ತಿದ್ದೇವೆಯೋ ಅದನ್ನು 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ಅವರು ಮದೀನದಲ್ಲಿ ಸ್ಥಾಪಿಸಿದ ವ್ಯವಸ್ಥೆಯಲ್ಲಿತ್ತು. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಶೋಷಣೆ, ಮೋಸ ನಡೆದರೆ ಪ್ರವಾದಿಯವರ ಧರ್ಮದ ಅಡಿಯಲ್ಲಿ ಯಾರಿಗೂ ಮೋಸ ಮಾಡಲು ಸಾಧ್ಯವಿಲ್ಲ. ಪ್ರವಾದಿ ಮುಹಮ್ಮದ್ ಅವರು ಜಗತನ್ನು ತೊರೆದು 1400 ವರ್ಷಗಳು ಕಳೆದು ಹೋಗಿದ್ದರೂ ಇಂದಿಗೂ ಅವರ ಅನುಸರಣೆ ಕಾರ್ಯ ನಡೆಯುತ್ತಿದೆ ಎಂದರು.

ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿ ಭಾರತ ದೇಶ ಸರ್ವ ಧರ್ಮದ ಶಾಂತಿಯ ತೋಟ. ಮುಸಲ್ಮಾನರ ಖುರಾನ್, ಹಿಂದುಗಗಳ ಭಗದ್ಗೀತೆ, ರಾಮಾಯಣ, ಕ್ರೀಶ್ಚಯನರ ಬೈಬಲ್ ಎಲ್ಲದರಲ್ಲೂ ಅದ್ಭುತವಾದ ವಿಚಾರಗಳಿವೆ. ಅದನ್ನು ಅನುಸರಿಸಿದಾಗ ಮಾತ್ರ ನಾವು ಉತ್ತಮ ದಾರಿಯಲ್ಲಿ ಸಾಗುತ್ತೇವೆ. ಇವತ್ತು ಸಮಾನತೆಯನ್ನು ಕಾಪಾಡಲು ನಮ್ಮಲ್ಲಿ ಮಾನವೀಯ ಮೌಲ್ಯಗಳ ಕೊರತೆಯಾಗಿದೆ ಹಾಗಾಗಿ ಮಾನವೀಯ ಮೌಲ್ಯ ಉಳಿಯಲು ಜಾತ್ಯಾತೀತ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕನಾಥ್ ಅವರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು. ದೇಶವನ್ನು ಕಟ್ಟುವವರಿಂದ ಈ ದೇಶದ ಹಿಂತಚಿಂತನೆ ಸಾಧ್ಯವಿದೆ. ಗೌತಮ ಬುದ್ದ, ಮುಹಮ್ಮದ್ ಪೈಗಂಬರ್, ಜೀಸಸ್ ನಿಂದ ಹಿಡಿದು ಗಾಂಧೀಜಿಯವರನ್ನು ಕೂಡಾ ಸೇರಿಸಿ ಎಲ್ಲರ ಆಲೋಚನೆಗಳ ಸಾರ ಸಂಗ್ರಹವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಂಡು ಕೊಂಡಿದ್ದಾರೆ. ಎಲ್ಲಾ ದಾರ್ಶನಿಕರ ವಚನಗಳು ಕೂಡಾ ಸಂವಿಧಾನದ ಪ್ರತಿಯೊಂದು ಪರಿಚೇದದಲ್ಲೂ ನೋಡಲು ಸಾಧ್ಯವಿದೆ. ಹಾಗಾಗಿ ಸಂವಿಧಾನ ಮನುಷ್ಯಕೇಂದ್ರಿತವಾಗದೆ ಅದು ಜೀವ ಕೇಂದ್ರಿತವಾಗಿದೆ. ಗಾಂಧೀಜಿ ಸಮಾಜ ಸುಧಾರಕರಾದರೆ ಅಂಬೇಡ್ಕರ್ ಸಮಾಜದ ಬದಲಾವಣೆ ಬಯಸಿದ ವ್ಯಕ್ತಿಯಾಗಿದ್ದರು. ಈ ನಿಟ್ಟಿನಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರಿಗೆ ಸೈದಾಂತಿಕ ಭಿನ್ನಾಭಿಪ್ರಾಯವಿತ್ತು. ಪೈಂಗಂಬರ್ ಅವರ ಮಾತುಗಳು ನನಗೆ ಅತ್ಯಂತ ಹೆಚ್ಚು ಪ್ರಭಾವ ಬೀರಿದೆ ಎಂದು ಗಾಂಧೀಜಿವಯರೇ ಬರೆದುಕೊಂಡಿದ್ದರು. ಅಂತಹ ಪ್ರಭಾವ ಬೀರಿದ್ದರಿಂದಲೇ ಅವರು ಮಹಾತ್ಮ ಗಾಂಧಿ ಆಗಲು ಸಾಧ್ಯವಾಯಿತು ಎಂದರು. ಡಾ. ಬಿ.ಆರ್ ಅಂಬೇಡ್ಕರ್ ಎಲ್ಲಾ ಸಮುದಾಯದವರಿಗೂ ಬಡವರಿಗಾಗಿ ಕೇಸ್ ನಡೆಸುತ್ತಿದ್ದರು. ಭಾರತ ವಿಭಜನೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.32 ಮೀಸಲಾತಿ ನೀಡುವಂತೆ ಅಂಬೇಡ್ಕರ್ ಹೋರಾಟ ನಡೆಸಿದರು. ಆದರೆ ಇವತ್ತು ಕೂಡಾ ಮುಸ್ಲಿಂ ಸಮುದಾಯಕ್ಕೆ ಯಾಕೆ ಮೀಸಲಾತಿ ಕೊಡಬೇಕು. ಅದೊಂದು ಧಾರ್ಮಿಕ ಭಾವನೆಯ ಸಮುದಾಯ ಅದಕ್ಕೆ ಮೀಸಲಾತಿ ಕೊಡುವಂತಿಲ್ಲ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರು ಅವತ್ತು ಪ್ರತಿಪಾದಿಸಿದ ಹೋರಾಟದಿಂದ ಇವತ್ತಿಗೂ ಮೀಸಲಾತಿ ಮುಸ್ಲಿಂ ಸಮುದಾಯಕ್ಕೆ ಸಿಗುತ್ತಿದೆ ಎಂದರು.

ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ಮಾಡಿದರು. ಪ್ರವಾದಿ ಯಾವುದೋ ಒಂದು ಕಾಲಕ್ಕೆ ಸೀಮಿತವಲ್ಲ. ಅವರು ಎಲ್ಲ ಕಾಲಕ್ಕೂ ಸಲ್ಲುವವರು. ಅವರು ಮಾರ್ಗದರ್ಶಕರೆಂದು ಬಾವಿಸಿದಾದರೆ ಅವರು ಈಗಲೂ ಇದ್ದಾರೆ ಎಂದು ಅರ್ಥ. ಅದೇ ರೀತಿ ಸ್ವಾಮಿ ವಿವೇಕಾನಂದರೂ ಕೂಡಾ ಆಧುನಿಕ ಕಾಲದ ಪ್ರವಾದಿ ಎಂದರು. ಪ್ರವಾದಿಗಳಲ್ಲಿರುವ ಮೂರು ಲಕ್ಷಣಗಳಲ್ಲಿ ಕಾರಣಿಕದ ಭಾಷೆ ಮಹತ್ವ ಪಡೆದಿದೆ. 'ಮ್ಯಾನ್ ಮೇಕಿಂಗ್ ಈಸ್ ಮೈ ಮಿಷನ್' ಎಂಬ ಮನುಷ್ಯರನ್ನು ರೂಪಿಸುವ ಅವರ ಗುಣ ಸ್ವಾಮಿ ವಿವೇಕಾನಂದ ಅವರಲ್ಲಿದೆ. ಜಗತ್ತಿನಲ್ಲಿ ವೈವಿಧ್ಯವಾದ ದೇಶ ಬೇರೆಲ್ಲೂ ಇಲ್ಲ. ಸಮಾನತೆಯನ್ನು ಗುರುತಿಸುವುದು ಮಾನವೀಯತೆ. ನಮಗೆ ಉಪದೇಶ, ಚಿಂತನೆ, ಭೋಧನೆ ಕಡಿಮೆ ಆಗಿಲ್ಲ. ಆದರೆ ಅದು ಆಚರಣೆ ಆಗದಿದ್ದರೆ ಪ್ರಯೋಜವಿಲ್ಲ. ಆದ್ದರಿಂದಲೇ ಎಲ್ಲಾ ಕಾಲದಲ್ಲೂ ಮಾರ್ಗದರ್ಶಕರು, ಪ್ರವಾದಿಗಳು ನಮಗೆ ಬೇಕಾಗಿದೆ. ಈ ನಿಟ್ಟಿನಲ್ಲಿ ವಿವೇಕಾನಂದರು ಪ್ರವಾದಿಯಾಗಿದ್ದಾರೆ. ಪ್ರವಾದಿಗಳು ನಮ್ಮ ಕಲ್ಪಣೆಯ ಹೊಸ ದೇವರನ್ನು ಸೃಷ್ಟಿಸುತ್ತಾರೆ. ನಾನು ಮೂರ್ತಿ ಪೂಜಕ. ಆದರೆ ಮುಹಮ್ಮದ್ ಪ್ರವಾದಿಯವರು ಮೂರ್ತಿ ಪೂಜೆ ಅಲ್ಲ ಎಂದು ಯಾಕೆ ಹೇಳಿದ್ದಾರೆಂದರೆ ನೀವು ದೇಹವಲ್ಲ ಎಂದರ್ಥ. ದೇಹದಲ್ಲಿರುವ ತತ್ವವನ್ನು ತಿಳಿಯಬೇಕಾಗಿದೆ. ಅದನ್ನು ಮೀರಿಸಬೇಕಾಗುವುದರಿಂದ ಮೂರ್ತಿ ಪೂಜೆ ಬೇಡ ಎಂದು ಹೇಳಿದ್ದಾರೆ. ಹಿಂದುಗಳಲ್ಲಿ ಕೂಡಾ ಮೂರ್ತಿ ಪೂಜೆಯನ್ನು ಕಂಡಿಸುವವರಿದ್ದಾರೆ. ಅದೇ ರೀತಿ ಕಲ್ಪಣೆಯ ದೇವರನ್ನು ಬದಲಾಯಿಸುವಾಗ ಭಾರತವನ್ನು ದೇವರೆಂದು ಪೂಜಿಸುವಂತೆ ಸ್ವಾಮಿ ವಿವೇಕಾನಂದರು ಹೇಳಿದ್ದರು. ಯಾಕೆಂದರೆ ಭಾರತ ವಾಸಿಗಳ ಸಮಸ್ಯೆಗಳನ್ನು ತನ್ನದೇ ಸಮಸ್ಯೆ ಎಂದು ಸೇವೆ ಮಾಡಬೇಕೆಂದರು.

ಯುವವಾಹಿನಿ ಕೇಂದ್ರೀಯ ಸಮಿತಿ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಕುರಿತು ಉಪನ್ಯಾಸ ನೀಡಿದರು. ದೇಶದ ಹಿತ ಚಿಂಚನೆಯನ್ನು ಮಾಡುತ್ತಿರುವ ಜಮಾಅತೆ ಇಸ್ಲಾಮಿ ಹಿಂದ್ ನಿಜಾರ್ಥದಲ್ಲಿ ದೇಶ ಭಕ್ತ ಸಂಘಟನೆ. ಯಾಕೆಂದರೆ ಉಪ್ಪಿನಂಗಡಿಯಲ್ಲಿ ಸ್ನೇಹದ ಸಂಕೋಲೆಯಾಗಿ ಹಲವು ಕಾರ್ಯಕ್ರಮ ಆಯೋಜಿಸಿದ್ದು ನಾನು ನೋಡಿದ್ದೇನೆ. ನಮ್ಮೂರ ಮಸೀದಿಗೆ ಬನ್ನಿ ಎಂಬ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದ್ಯಮಗಳಲ್ಲಿ ಬಂದ ಕೆಲವೊಂದು ವಿಚಾರಗಳನ್ನು ತೊಡೆದು ಹಾಕುವ ಕಾರ್ಯ ಜಮಾಅತೆ ಇಸ್ಲಾಮಿ ಹಿಂದ್ ಮೂಲಕ ಆಗಿದೆ. ಹಾಗಾಗಿ ಸಹೋದರತೆಯ ಬೆಸುಗೆಯನ್ನು ಬೆಸೆಸುವ ಕೆಲಸ ಈಗಲೂ ಆಗುತ್ತಿದೆ ಎಂದಾದರೆ ಅದು ಇ ಮಣ್ಣಿನ ಗುಣ ಎಂದರು. 18ನೇ ಶತಮಾನದಲ್ಲಿ ಅಂದಕಾರ, ಅಜ್ಞಾನ, ಶೋಷಣೆ ಸಂದರ್ಭದಲ್ಲಿ ಉದಯಿಸಿದ ಸೂರ್ಯ ಬ್ರಹ್ಮಶ್ರೀ ನಾರಾಯಣಗುರುಗಳು. ಅವರು ಸಮಾಜ ಸುಧಾಕರಾಗಿ ಜಗತ್ತಿಗೆ ಬೆಳಕು ಕೊಟ್ಟ ದಾರ್ಶನಿಕರು. ಇವತ್ತು ನಮಗೆ ಸ್ವಾಭಿಮಾನ, ಸಮಾನತೆ ರಾತ್ರಿ ಬೆಳಗಾಗುವುದರೊಳಗೆ ಸಿಗಲಿಲ್ಲ. ಅದು ಬ್ರಹ್ಮಶ್ರೀ ನಾರಾಯಣಗುರುಗಳಿಂದ ಸಿಕ್ಕಿದೆ. ನಮ್ಮಲ್ಲಿ ನಾವು ದೇವರು ಕಾಣಬೇಕೆಂಬ ಶ್ರೇಷ್ಠ ಪರಿಕಲ್ಪಣೆ ಕೊಟ್ಟ ಅವರು ಸರ್ವ ಧರ್ಮ ಸಮನ್ವತೆಯನ್ನು ಕಾಪಾಡಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆ ಶಿಕ್ಷಣ ಅಂಕ ತೆಗೆಯುವ ಶಿಕ್ಷಣ ಆಗದೆ ಗುರು ಹಿರಿಯರ ಬಗ್ಗೆ ಗೌರವ, ಆಚಾರ ವಿಚಾರ, ಸಂಸ್ಕೃತಿ, ದೇಶದ ಬಗ್ಗೆ ಮತ್ತು ನೈತ್ತಿಕ ಸ್ಥೈರ್ಯ ಕೊಡುವ ಶಿಕ್ಷಣ ಆಗಿರಬೇಕು. ಆಗ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ವಿಶ್ವಮಾನವ ಎಂಬ ಸಂದೇಶ ನೀಡಿದ ನಾರಾಯಣ ಗುರುಗಳು ದೇವರು ಒಬ್ಬ ನಾಮ ಹಲವು ಎಂಬುದಕ್ಕೆ ಪೂರಕವಾಗಿ ಗಾಂಧೀಜಿಯವರು ತಮ್ಮ ಹಾಡಿನಲ್ಲಿ ಈಶ್ವರ ಅಲ್ಲ ತೇರೆ ನಾಮ್ ಎಂಬ ಬಹಳ ಶ್ರೇಷ್ಠ ಸಂದೇಶ ಕೊಟ್ಟಿದ್ದಾರೆ. ಆದರೆ ಗಾಂಧೀಜಿಯವರನ್ನು ಮರೆತು ಗೋಡ್ಸೆ ವಾದವನ್ನು ಮಂಡಿಸುವಾಗ, ಅಂಬೇಡ್ಕರ್ ಅವರ ಬಗ್ಗೆ ಹೇಳಿ ಕೊನೆಗೆ ಅವರ ಸಂವಿಧಾನವನ್ನೇ ತಿರುಚುವಾಗ ನಾವು ಜಾಗೃತರಾಗಬೇಕಾಗಿದೆ. ಇದಕ್ಕೆ ಪೂರಕವಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಸಿ.ಎ.ಮುಹಮ್ಮದ್ ಇಸ್ಹಾಕ್ ಅವರು ಮಾತನಾಡಿ ಸಮಾಜದ ಒಳಿತಿಗಾಗಿ ಶ್ರಮಿಸಿದವರ ಚಿಂತನೆಯನ್ನು ಸಮಾಜದಲ್ಲಿ ಹಂಚುವ ಮೂಲಕ ಜನರಲ್ಲಿ ಅದನ್ನು ಪಾಲಿಸುವ ಸ್ಪೂರ್ತಿಯನ್ನು ತುಂಬಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಬಹಳ ಅಗತ್ಯವಾಗಿದೆ. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆದಾಗ ಎಳವೆಯಲ್ಲೇ ಮಕ್ಕಳಿಗೆ ಉತ್ತಮ ಸಂದೇಶ ಸಿಗುತ್ತದೆ ಎಂದರು. ವಿವಿಧ ಧರ್ಮ ಗ್ರಂಥಗಳ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲು ಸಾಧ್ಯ ಆಗಬೇಕು. ಅದರಿಂದ ಜನರು ಸ್ಪೂರ್ತಿ ಪಡೆಯಬೇಕು. ದೇಶ ಪ್ರೇಮ ಎಂದು ಹೇಳುವಾಗ ಬರಿ ಮಣ್ಣನ್ನು ಪ್ರೀತಿಸುವುದಲ್ಲ. ನಾವು ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯನ್ನು ಪ್ರೀತಿಸಬೇಕು. ದೇಶ ಪ್ರೇಮದ ಹೆಸರಿನಲ್ಲಿ ದೇಶದ ಸಂಪತ್ತನ್ನು ನಾಶ ಮಾಡುವ ವ್ಯಕ್ತಿಗಳು ನಾವಾಗಬಾರದು. ದೇಶದ ಸಂಪತ್ತನ್ನು ರಕ್ಷಿಸುವಂತರಾಗಬೇಕು. ಈ ಶಾಂತಿಯ ನೆಮ್ಮದಿಯನ್ನು ಕಾಪಾಡುವ ಗುಣ ನಮ್ಮಲ್ಲಿ ಇರಬೇಕೆಂದರು. ಗಾಂಧಿಜಿಯವರು ಒಪ್ಪಿಕೊಂಡ ತತ್ವ ಸಿದ್ದಾಂತಕ್ಕಾಗಿ ಜೀವ ತ್ಯಾಗ ಮಾಡಬೇಕಾಯಿತು. ಪ್ರವಾದಿಯವರ ಸಂದೇಶ, ಗಾಂಧೀಜಿಯವರು ಅಳವಡಿಸಿಕೊಂಡ ಸಮಾಜದಲ್ಲಿ, ಸ್ವಾಮಿ ವಿವೇಕಾನಂದರು ಕಲಿಸಿಕೊಟ್ಟ ಚಿಂತನೆಗಳನ್ನು, ಅಂಬೇಡ್ಕರ್ ಅವರ ಚಿಂತನೆಗಳನ್ನು, ನಾರಾಯಣಗುರುಗಳ ಚಿಂತನೆಗಳನ್ನು ಮೈಗೂಡಿಸಿದರೆ ಸಮಾಜದಲ್ಲಿ ಅಶಾಂತಿ ಉಂಟಾಗಲು ಸಾಧ್ಯವಿಲ್ಲ. ಗಾಂಧೀಜಿಯವರನ್ನು ಕೊಂದಂತಹ ಶತ್ರುಗಳ ಸಿದ್ದಾಂತವನ್ನು ಅಳವಡಿಸಿಕೊಂಡ ಸಮಾಜದಲ್ಲಿ ಅಶಾಂತಿ, ಅರಾಜಕತೆ ಉಂಟಾಗುತ್ತದೆ. ಈ ನಿಟಿನಲ್ಲಿ ಸಮಾಜವನ್ನು ಇಂತಹ ಸಿದ್ದಾಂತದಿಂದ ಕಾಪಾಡಬೇಕಾದ ಹೊಣೆಗಾರಿಕೆಯನ್ನು ದೇಶದ ಹಿತಚಿಂತನೆಯ ಮೂಲಕ ನಮ್ಮಲ್ಲಿ ಉಂಟಾಗಬೇಕು ಎಂದರು.

ಯುವ ಸಮುದಾಯಕ್ಕೆ ಇದನ್ನು ತಿಳಿಸುವ ಕೆಲಸ ಆಗಬೇಕು. ಅಮಲುಪದಾರ್ಥದ ಪಿಡುಗು, ಕೋಮುವಾದದ ಅಮುಲು ಗಳನ್ನು ಇವತ್ತು ಬಿತ್ತಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಅತ್ಯಂತ ದೊಡ್ಡ ಅಧರ್ಮ ಕೋಮುವಾದ. ಕೋಮುವಾದದ ಮೂಲಕ ಧರ್ಮ ನಾಶವಾಗುತ್ತದೆ ಹೊರತು, ರಕ್ಷಿಸಲು ಸಾಧ್ಯವಿಲ್ಲ. ಧರ್ಮವನ್ನು ಪ್ರೀತಿಸುವವರು ಧರ್ಮದ ರಕ್ಷಣೆ ಮಾಡಬೇಕು ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಇದರ ಮಂಗಳೂರು ವಲಯ ಉಪಸಂಚಾಲಕ ಅಮೀನ್ ಅಹ್ಸನ್, ಹಿರಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಕೆ ಎಮ್ ಶರೀಪ್ ಸಾಹೇಬ್, ಮೌಲನಾ ಎ.ಕೆ. ತಂಙಳ್, ಮಂಗಳೂರು ಸೀರತ್ ಸಮಿತಿಯ ವಲಯಾಧ್ಯಕ್ಷ ಶಹಿದ್ ಇಸ್ಮಾಯಿಲ್,ಮೈಸೂರು ವಲಯ ಸಂಚಾಲಕ ಅಬ್ದುಲ್ ಸಲಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಲತೀಪ್ ಆಲಿಯ ಖುರಾನ್ ಪಠಿಸಿದರು. ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಗಪೂರ್ ಕುಳಾಯಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಮುಹಮ್ಮದ್ ತುಂಬೆ, ಡಾ| ಮುಹಮ್ಮದ್ ಮುಬೀನ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ಹತ್ಯೆಗೊಳಗಾದ ಅಕ್ಷಯ್ ಕಲ್ಲೇಗ, ನೇಜಾರು ಎಂಬಲ್ಲಿ ಹತ್ಯೆಗೊಳಗಾದ ಕುಟುಂಬಕ್ಕೆ ಮತ್ತು ಇಸ್ರೇಲ್, ಪ್ಯಾಲೆಸ್ತೈನ್ ಸಹಿತ ಹಲವು ರಾಷ್ಟ್ರಗಳಲ್ಲಿ ಘರ್ಷಣೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.





share
ವಾರ್ತಾಭಾರತಿ
ವಾರ್ತಾಭಾರತಿ
Next Story
X