ಎಸ್‌ಜೆಎಂ ದ.ಕ ಜಿಲ್ಲಾ ವೆಸ್ಟ್: ಮುಅಲ್ಲಿಮ್ ಮೆಹರ್ಜಾನ್ ಸ್ಪರ್ಧೆ

ಮಂಗಳೂರು: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಅಂಗೀಕೃತ ಮದ್ರಸಗಳ ಅಧ್ಯಾಪಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಾಯೋಜಿತ ಮುಅಲ್ಲಿಮ್ ಮೆಹರ್ಜಾನ್ 2025 ಇದರ ಎಸ್‌ಜೆಎಂ ದ..ಜಿಲ್ಲಾ ವೆಸ್ಟ್ ಜಿಲ್ಲಾ ಮಟ್ಟದ ಮುಅಲ್ಲಿಂ ಮೆಹರ್ಜಾನ್ ಸ್ಪರ್ಧಾ ಸಮಾರಂಭ ತಲಪಾಡಿ ದಾರುಸ್ಸಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಜಮಾಅತ್ ಅಧ್ಯಕ್ಷ ಯಾಕೂಬ್ ಪೂಮಣ್ಣು ರವರು ಧ್ವಜಾರೋಹಣಗೈದರು.
ಮುಅಲ್ಲಿಂ ಮೆಹರ್ಜಾನ್ ಉದ್ಘಾಟನಾ ಸಮಾರಂಭವು ವೆಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ಮುದರ್ರಿಸ್ ಹಾಫಿಝ್ ಅಹ್ಮದ್ ನಝೀರ್ ಸಖಾಫಿ ದುಆ ನೆರವೇರಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಂ ಜೆ ರಾಜ್ಯ ಜೊತೆ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ ಅಬ್ದುರ‌್ರಶೀದ್ ಝೈನಿ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು.
ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿ ಚೇರ್ಮೆನ್ ಅಬ್ದುಲ್ ಮಜೀದ್ ಸಖಾಫಿ ಮೆಲ್ಕಾರ್ ಸ್ವಾಗತಿಸಿದರು. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಸುರತ್ಕಲ್ ವಂದಿಸಿದರು.
ಎಸ್‌ಜೆಎಂ ದ.ಕ ವೆಸ್ಟ್ ಜಿಲ್ಲೆಯ ಅಧೀನ 13 ರೇಂಜುಗಳ 140ರಷ್ಟು ಅಧ್ಯಾಪಕರುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಹೈರೆನ್ ಮತ್ತು ಗ್ರೌಂಡ್ ರೆನ್ ಎಂಬ ಎರಡು ವಿಭಾಗಗಳಲ್ಲಿ 38 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಂಜನಾಡಿ ರೇಂಜ್ ಚಾಂಪಿಯನ್ ಆಗಿ ಟ್ರೋಫಿ ಪಡೆಯಿತು.
ರನ್ನರ್ ಅಪ್ ಟ್ರೋಫಿಯೊಂದಿಗೆ ಕೋಣಾಜೆ ರೇಂಜ್ ದ್ವಿತೀಯ ಸ್ಥಾನ ಪಡೆಯಿತು. ಹೈರೆನ್ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಸುರತ್ಕಲ್ ರೇಂಜಿನ ಹಬೀಬ್ ಸಖಾಫಿ ಕಾಟಿಪಳ್ಳ ಹಾಗೂ ಗ್ರೌಂಡ್ ರೆನ್ ವಿಭಾಗದಲ್ಲಿ ಕೈಕಂಬ ರೇಂಜಿನ ಜಾಫರ್ ಸ್ವಾದಿಖ್ ಸಖಾಫಿ ವೈಯಕ್ತಿಕ ಚಾಂಪಿಯನ್ ಟ್ರೋಫಿಯನ್ನು ಪಡೆದರು.
ಸ್ಪರ್ಧಾ ಕಾರ್ಯಕ್ರಮದ ಬಳಿಕ ಸಮಾರೋಪ ಸಮಾರಂಭ ನಡೆಯಿತು. ಎಸ್‌ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಎಂ ಮದನಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ತಲಪಾಡಿ ಶುಭ ಹಾರೈಸಿ ಮಾತನಾಡಿದರು.
ತಲಪಾಡಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಪೂಮಣ್ಣು, ಕಾರ್ಯದರ್ಶಿ ಶರೀಫ್ ತಂಲ್ ಮಕ್ಯಾರ್, ಮೂಸ ಮಕ್ಯಾರ್, ಅಬ್ದುಲ್ ಖಾದರ್ ಮಕ್ಯಾರ್, ತಲಪಾಡಿ ದಾರುಸ್ಸಲಾಂ ಮದ್ರಸ ಮುಖ್ಯೋಪಾಧ್ಯಾಯ ಅಬ್ದುಲ್ ಜಲೀಲ್ ಹಮ್ದಾನಿ, ಶರೀಫ್ ಮುಸ್ಲಿಯಾರ್ ತಲಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು.
ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿ ಕನ್ವೀನರ್ ಸೆರ್ಕಳ ಇಬ್ರಾಹಿಂ ಸಖಾಫಿ, ವೆಸ್ಟ್ ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಇಮ್ದಾದಿ, ಸಮಿತಿ ಸದಸ್ಯರಾದ ನವಾಝ್ ಸಖಾಫಿ ಉಳ್ಳಾಲ, ಚಿಪ್ಪಾರ್ ಅಬ್ದುರ‌್ರಹ್ಮಾನ್ ಸಖಾಫಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.







