MEIF ಶಿಕ್ಷಕರಿಗೆ ಎರಡನೇ ಹಂತದ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ MEIF ವಿದ್ಯಾ ಸಂಸ್ಥೆಗಳ ಶಿಕ್ಷಕರಿಗೆ ಎರಡನೇ ಹಂತದ ಎರಡು ದಿವಸಗಳ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರವನ್ನು ಪ್ರೆಸಿಡೆನ್ಸಿ ಸ್ಕೂಲ್ ವಾಮಂಜೂರ್ ನಲ್ಲಿ ಜ. 17 ಮತ್ತು18 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಯೆನೆಪೋಯ ಶಾಲೆ ಮತ್ತು ಪಿಯು ಕಾಲೇಜಿನ ಶೈಕ್ಷಣಿಕ ಮತ್ತು ಕಾರ್ಯಾಚರಣೆಗಳ ನಿರ್ದೇಶಕಿ ಮಿಶ್ರಿಯ ಜಾವೇದ್, ಪ್ರೆಸಿಡೆನ್ಸಿ ಸ್ಕೂಲ್ ಬೆಂಗಳೂರು ಮತ್ತು ಮಂಗಳೂರಿನ ಪ್ರಿನ್ಸಿಪಾಲ್ ಮತ್ತು ಡೈರೆಕ್ಟರ್ ಭುವನೇಶ್ವರಿ ಅವರು ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು MEIF ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಪರಿಣಿತ ತಂಡದವರಾದ ರಾಜೇಶ್ವರಿ, ಲಿಪಿಕಾ, ಜಯಶ್ರೀ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಆರಂಭದಲ್ಲಿ ಮಂಗಳೂರು ಪ್ರೆಸಿಡೆನ್ಸಿ ಸ್ಕೂಲ್ ಪ್ರಾಂಶುಪಾಲರಾದ ಶೈಲಾ ಸಾಲ್ದಾನ ಸ್ವಾಗತಿಸಿ, ಕಾರ್ಡಿನೇಟರ್ ಲೊಲಿತಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಪ್ರೆಸಿಡೆನ್ಸಿ ಸ್ಕೂಲ್ ಮಂಗಳೂರು ಇದರ ಕಾರ್ಡಿನೇಟರ್ ಜಾವಿದ್, ಕಾರ್ಯದರ್ಶಿ ಅನ್ವರ್ ಗೂಡಿನಬಳಿ, ಶಾರಿಕ್, ಕೋಶಾಧಿಕಾರಿ ನಿಸಾರ್, ಕನ್ವೀನರ್ ಫರ್ವೀಝ್ ಅಲಿ ಉಪಸ್ಥಿತರಿದ್ದರು.
ಉಭಯ ಜಿಲ್ಲೆಗಳ ಇಂಗ್ಲಿಷ್ ಭಾಷಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೊದಲನೇ ಹಂತದಲ್ಲಿ ಮೂರು ದಿನಗಳ ಕಾರ್ಯಕ್ರಮ ನವೆಂಬರ್ ತಿಂಗಳಲ್ಲಿ ನಡೆದಿದ್ದು, ಎರಡನೇ ಹಂತದ ಎರಡು ದಿವಸದ ಕಾರ್ಯಗಾರ ಇಂದು ನಡೆಯಿತು.
ಈ ಕಾರ್ಯಗಾರದಲ್ಲಿ ಉತ್ತಮ ತರಬೇತುದಾರರಾಗಿ ಝಕಿಯಾ ಖತೀಜಾ (ತಖ್ವಾ ಆಂಗ್ಲ ಮಾಧ್ಯಮ ಶಾಲೆ ಪಂಪ್ವೆಲ್), ಆಯಿಷಾ ತಸ್ನೀಂ (ಹಿರಾ ಶಾಲೆ ಬಬ್ಬುಕಟ್ಟೆ), ಖಾಝಿ ಸನಾ (ಝಿಯಾ ಆಂಗ್ಲ ಮಾಧ್ಯಮ ಶಾಲೆ, ಕಂಡಲೂರ್, ಕುಂದಾಪುರ), ಮಂಜುಶಾ (ಕ್ರಸೆಂಟ್ ಆಂಗ್ಲ ಮಾಧ್ಯಮ ಶಾಲೆ, ಕಾಪು), ಕುರೇಶ ನುಸ್ರತ್ (ಸ್ನೇಹ ಪಬ್ಲಿಕ್ ಸ್ಕೂಲ್, ಪಕ್ಕಲಡ್ಕ, ಬಜಲ್), ತಸ್ಲೀಮಾ (ಅಂಜುಮನ್ ವಿದ್ಯಾ ಸಂಸ್ಥೆ, ಜೋಕಟ್ಟೆ) ಈ 6 ಶಿಕ್ಷಕರನ್ನು ಆಯ್ಕೆ ಮಾಡಲಾಯಿತು.
ಕಾರ್ಯಾಗಾರದ ಸಂಪೂರ್ಣ ಪ್ರಾಯೋಜಕತ್ವವನ್ನು ಪ್ರೆಸಿಡೆನ್ಸಿ ಯುನಿವರ್ಸಿಟಿ ಬೆಂಗಳೂರು ನಿರ್ವಹಿಸಿದರು.







