ಮೀಫ್ ವತಿಯಿಂದ ಪ್ರತಿಭಾವಂತ ಪಿಯುಸಿ (ವಿಜ್ಞಾನ) ವಿದ್ಯಾರ್ಥಿಗಳಿಗೆ ಉಚಿತ ನೀಟ್, ಸಿಇಟಿ ಕ್ರ್ಯಾಶ್ ಕೋರ್ಸ್

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಕಚೇರಿ ಮಂಗಳೂರು ವತಿಯಿಂದ ಯೆನೆಪೋಯ ಪಿ.ಯು. ಕಾಲೇಜಿನ ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ 45 ದಿವಸಗಳ ಉಚಿತ ನೀಟ್ / ಸಿ.ಇ.ಟಿ. ಕ್ರ್ಯಾಶ್ ಕೋರ್ಸ್ ಅನ್ನು ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಎರಡು ಪ್ರತ್ಯೇಕ ಬ್ಯಾಚುಗಳಲ್ಲಿ 15 ನುರಿತ ಉಪನ್ಯಾಸಕರಿಂದ ತರಗತಿ ನಡೆಯಲಿದೆ.
ಷರತ್ತುಗಳು:-
1. ವಿದ್ಯಾರ್ಥಿಯು ಪಿಯುಸಿ (ವಿಜ್ಞಾನ) ಸಿದ್ಧತಾ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.
2. ಮೀಫ್ ವಿದ್ಯಾ ಸಂಸ್ಥೆಯಲ್ಲಿ ಮತ್ತು ಸರಕಾರಿ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.
3. ಮೀಫ್ ವ್ಯಾಪ್ತಿಗೆ ಒಳಪಡುವ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ 32 ಉಚಿತ ಹಾಸ್ಟೆಲ್ ನ ಸೌಲಭ್ಯ ಒದಗಿಸಲಾಗುವುದು.
4. ಶೇಕಡಾ 80 ಕ್ಕಿಂತಲೂ ಕಡಿಮೆ ಅಂಕ ಪಡೆದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಇತರ ಆಧಾರದ ಮೇಲೆ ಪ್ರಾಶಸ್ತ್ಯ ನೀಡಲಾಗುವುದು.
5. ತರಗತಿಯು 21/3/2026 ರಿಂದ 1/5/2026 ರ ವರೆಗೆ ಜರಗಲಿರುವುದು.
6. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/1/2026.
7. ಒಟ್ಟು 200 ಸೀಟುಗಳು ಮಾತ್ರ ಲಭ್ಯವಿರುವುದರಿಂದ ಮೊದಲು ನೋಂದಾಯಿಸುವವರಿಗೆ ಮೊದಲ ಆಧ್ಯತೆ ನೀಡಲಾಗುವುದು.
8. ನಿಗದಿತ ಅರ್ಜಿ ನಮೂನೆಗಾಗಿ ಸ್ಥಳೀಯ ಮೀಫ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರನ್ನು ಸಂಪರ್ಕಿಸುವುದು. ಅಥವಾ ಮೀಫ್ ಕಚೇರಿಗೆ ಭೇಟಿ ನೀಡುವುದು.
9. ಹೆಚ್ಚಿನ ಮಾಹಿತಿಗಾಗಿ ಮೀಫ್ ಮೊಬೈಲ್ ಸಂಖ್ಯೆ 8792115666 ಅನ್ನು ಸಂಪರ್ಕಿಸಬಹುದು ಎಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.







