ಮೀಫ್ ವತಿಯಿಂದ ಉಚಿತ ಸೀಟುಗಳ 4ನೇ ಪಟ್ಟಿ ಪ್ರಕಟ

ಮಂಗಳೂರು: ಈಗಾಗಲೇ ಮೀಫ್ ವತಿಯಿಂದ ಮಂಗಳೂರು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ 300ಕ್ಕೂ ಹೆಚ್ಚು ಉಚಿತ ಸೀಟುಗಳಿಗೆ ಬಂದ ಅರ್ಜಿಗಳ ಪೈಕಿ ಆರ್ಥಿಕವಾಗಿ ಹಿಂದುಳಿದ 200ಕ್ಕೂ ಮಿಕ್ಕ ಬಡ ವಿದ್ಯಾರ್ಥಿಗಳು ಉಚಿತ ಸೀಟು ಪಡೆದುಕೊಂಡಿದ್ದಾರೆ. ಉಳಿದ ಅರ್ಜಿಗಳು ಪರೀಶೀಲನೆ ಹಂತದಲ್ಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅವರು ತಿಳಿಸಿದ್ದಾರೆ.
ಇದರ ಮುಂದುವರಿದ ಭಾಗವಾಗಿ, ಪುನಃ ಕೆಲವು ವಿದ್ಯಾ ಸಂಸ್ಥೆಗಳು ಉಚಿತ ಸೀಟುಗಳ ಕೊಡುಗೆಯನ್ನು ಮೀಫ್ ಗೆ ನೀಡಿವೆ. ವಿವರಗಳು ಈ ಕೆಳಗಿನಂತಿದೆ.
I)
1. Civil Engineering
2. Mechanical Engineering
3. B.Sc in Interior Design
4. BBA in Logistics
5. BCA in AI & ML
6. Hotel Management
7. Interior Design
8. Fashion Design
II) ಮೆಡಿಕಲ್ ಸೀಟುಗಳಿಗೆ ಸ್ಕಾಲರ್ಷಿಪ್
ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆಯುವ ಅರ್ಹ ಇಬ್ಬರು ವಿದ್ಯಾರ್ಥಿಗಳಿಗೆ ಅವರ ಸರಕಾರಿ ಶುಲ್ಕವನ್ನು ಭರಿಸಲಾಗುವುದು.
III) NEET ಪುನರಾವರ್ತಿತ ವಿದ್ಯಾರ್ಥಿಗಳು
ಈ ವರ್ಷ ನಡೆದ NEET ಪರೀಕ್ಷೆಗಳಲ್ಲಿ ಅತೀ ಕಡಿಮೆ ಅಂತರದಿಂದ MBBS ಸೀಟು ಪಡೆಯಲು ಅವಕಾಶ ಕಳಕೊಂಡು, ಪಿಯುಸಿ ಯಲ್ಲಿ ಶೇಕಡಾ 90% ಕ್ಕೂ ಹೆಚ್ಚು ಮತ್ತು NEET ಪರೀಕ್ಷೆಯಲ್ಲಿ 250 ಕ್ಕೂ ಹೆಚ್ಚು ಅಂಕ ಪಡೆದ 40 ವಿದ್ಯಾರ್ಥಿಗಳಿಗೆ ಮಂಗಳೂರಿನ ಹಾಗೂ ಸುತ್ತ ಮುತ್ತಲ ವಿದ್ಯಾ ಸಂಸ್ಥೆಗಳಲ್ಲಿ ಒಂದು ವರ್ಷದ ಉಚಿತ ಪುನರಾವರ್ತಿತ NEET ತರಬೇತಿ ನೀಡಲಾಗುವುದು.
IV) CET/NEET/JEE/CAT ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ
ಮೇಲಿನ ಕೋರ್ಸುಗಳಿಗೆ ಆಯ್ಕೆಗೊಂಡ 20 ಅರ್ಹ ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಅವರ ಸರಕಾರಿ ಶುಲ್ಕವನ್ನು ಭರಿಸಲು ಗರಿಷ್ಠ ತಲಾ 25000 ವರೆಗೆ ಆರ್ಥಿಕ ಸಹಾಯ ನೀಡಲಾಗುವುದು.
ಈ ಪ್ರಯೋಜನವನ್ನು ದ.ಕ, ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ MEIFವಿದ್ಯಾ ಸಂಸ್ಥೆಗಳ ಮತ್ತು ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಕಲಿತ ಆರ್ಥಿಕವಾಗಿ ಹಿಂದುಳಿದ ಬಡ / ಅನಾಥ ಅರ್ಹ ಮುಸ್ಲಿಮ್ ವಿದ್ಯಾರ್ಥಿಗಳು ಪಡೆಯಬಹುದು. ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಜು. 31ರ ಒಳಗಾಗಿ MEIF ಕಛೇರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳು MEIF ಕಛೇರಿಯಲ್ಲಿ ಲಭ್ಯವಿರುವುದು.
ಹೆಚ್ಚಿನ ಮಾಹಿತಿಗಾಗಿ ಈ 8792115666 ಮೊಬೈಲ್ ಸಂಖ್ಯೆ ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರು ಮೂಸಬ್ಬ ಪಿ. ಬ್ಯಾರಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







