ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ : ಮಾರ್ನಬೈಲು ಇಲ್ಲಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟವು ಶನಿವಾರ ಕಾಲೇಜು ಆವರಣದಲ್ಲಿ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟವನ್ನು " ಕಲ್ಲಡ್ಕ ಮ್ಯೂಸಿಯಮ್ "ನ ಮಾಲಕ ಕೆ.ಎಸ್. ಮುಹಮ್ಮದ್ ಯಾಸೀರ್ ಉದ್ಘಾಟಿಸಿದರು.
ಯಾಸೀರ್ ಅವರನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಲುವಾಗಿ ಎಂ.ಡಿ ಮಂಚಿ ಸನ್ಮಾನಿಸಿದರು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುನಿತಾ ಪಿರೇರಾ, ಉಪನ್ಯಾಸಕರಾದ ಹನೀಫ್ ಎಂ, ರಕ್ಷಿತಾ ಕುಮಾರಿ, ಸಂಪ್ರೀತ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹ್ರೂಫ ಸ್ವಾಗತಿಸಿ, ಅಸ್ಬಹುನ್ನಿಸ ವಂದಿಸಿದರು. ನಝ್ಮಿಯ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು .
ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು ಹಾಗೂ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Next Story









