ಕ್ರೀಡೆಯಿಂದ ಮಾನಸಿಕ ಉಲ್ಲಾಸ : ಶಾಸಕ ಉಮಾನಾಥ ಕೋಟ್ಯಾನ್

ಮಂಗಳೂರು, ಅ.16:. ಕ್ರೀಡೆಯಿಂದ ಉತ್ತಮ ದೇಹಾರೋಗ್ಯ, ಮಾನಸಿಕ ಉಲ್ಲಾಸ ಪಡೆಯಬಹುದು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಸ್ಪರ್ಧಿಸಿ ಕ್ರೀಡಾಸ್ಪೂರ್ತಿ ಮೆರೆಯಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ದಸರಾ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲಿನಿಂದ ಎಂದೂ ಕುಗ್ಗಬಾರದು. ಸೋಲು ಗೆಲುವಿಗೆ ಮುಂದಿನ ಮೆಟ್ಟಿಲು ಆಗಿದೆ. ನಿರಂತರ ಪ್ರಯತ್ನ ವನ್ನು ಮುಂದುವರಿಸಬೇಕು.ಆಗ ಯಶಸ್ಸು ನಿಮ್ಮದಾಗುತ್ತದೆ. ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಮಾತನಾಡಿ, ಹಿಂದೆ ಪ್ರತಿವರ್ಷ ತಾಲೂಕು ಕ್ರೀಡಾಕೂಟ ನಡೆಯುತ್ತಿತ್ತು. ಆ ಬಳಿಕ ಕೆಲವು ವರ್ಷಗಳಿಂದ ನಿಂತು ಹೋಗಿತ್ತು. ಇದೀಗ ಈ ವರ್ಷ ಕ್ರೀಡಾಕೂಟವನ್ನು ಆರಂಭಿಸಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಗೌರವಾಧ್ಯಕ್ಷ ರಂಜನ್ ಮಿಜಾರ್, , ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ರವಿಕಲಾ, ಉಮಾ ಶ್ರೀಕಾಂತ್ ಮತ್ತಿತರರು ಇದ್ದರು.
ವಿವಿಧ ಸ್ಪರ್ಧೆಗಳ ಆಯೋಜಿಸಲಾಗಿತ್ತ್ತು.ಹೈಸ್ಕೂಲ್ ವಿಭಾಗದ ಬಾಲಕರು/ಬಾಲಕಿಯರಿಗೆ 100 ಮೀ., 200 ಮೀ., 400 ಮೀ., 800 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಸ್ಪರ್ಧೆ ಮತ್ತು ಸೀನಿಯರ್ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆ ಯರಿಗೆ 100 ಮೀ., 200 ಮೀ., 400 ಮೀ., 800 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿತ್ತು. ಒಬ್ಬರಿಗೆ 3 ಟ್ಯಾಕ್, 1 ಫೀಲ್ಡ್ ಕ್ಷೇತ್ರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.. ವಿಜೇತರಿಗೆ ಪಾರಿತೋಷಕ, ಸರ್ಟಿಫಿಕೆಟ್ ಸಹಿತ ನಗದು ಬಹುಮಾನ ವಿತರಿಸಲಾಯಿತು.
ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುರೇಶ್ ಪೂಜಾರಿ ಕುಳಾಯಿ ಅವರು ವಂದಿಸಿದರು. ಸಾಧು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.







