ವೃತ್ತ ಮೆಸ್ಕಾಂ ಕಿರಿಯ ಇಂಜಿನಿಯರ್ ಗುರುಮೂರ್ತಿಗೆ ಬೀಳ್ಕೊಡುಗೆ

ಮಂಗಳೂರು, ಜೂ.1: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಕೇಂದ್ರ ಸಮಿತಿ, ಸ್ಥಳೀಯ ಸಮಿತಿ ಮತ್ತು ಎಲ್ಲಾ ಪ್ರಾಥಮಿಕ ಸಮಿತಿಗಳ ಸಹಯೋಗದೊಂದಿಗೆ ಕ.ವಿ.ಪ್ರ,ನಿ.ನೌ.ಸಂಘ ಮೆಸ್ಕಾಂ ಮಂಗಳೂರು ಇದರ ಉಪಾಧ್ಯಕ್ಷರು ಹಾಗೂ (ವಿ), ಎಲ್‌ಟಿ.ರೇಟಿಂಗ್ ಉಪವಿಭಾಗ ಅತ್ತಾವರ ಇದರ ಕಿರಿಯ ಇಂಜಿನಿಯರ್ ಎಚ್. ಎಸ್. ಗುರುಮೂರ್ತಿ ಇವರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನಗರದ ಬೊಂದೆಲ್‌ನಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ನೌಕರರ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು ಹಾಗೂ ಎಸ್ಕಾಂಬೆಂಗಳೂರು ಇದರ ನಿರ್ದೇಶಕ ಕೆ. ಬಲರಾಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಮೆಸ್ಕಾಂನ ಪ್ರಧಾನ ವ್ಯವಸ್ಥಾಪಕ ಡಾ. ಮಂಜುನಾಥ ಸ್ವಾಮಿ ಬಿ.ಎಸ್ ಹಾಗೂ ಮಂಗಳೂರು ಬಿಜೈ ಮೆಸ್ಕಾಂನ ನಿರ್ದೇಶಕ (ತಾಂತ್ರಿಕ) ಮಹಾದೇವ ಸ್ವಾಮಿ ಪ್ರಸನ್ನ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಹಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಂ, ಸಂಘದ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಕೆ.ಶಂಕರ ಪ್ರಕಾಶ, ಹಿರಿಯ ಕಾರ್ಮಿಕ ಮುಖಂಡ ಕೆ. ಶಶೀಂದ್ರ, ಮಂಗಳೂರು ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಇ. ಚೆನ್ನೆಶ್ ಮುಂತಾದವರು ಪಾಲ್ಗೊಂಡಿದ್ದರು.
ಕ.ವಿ.ಪ್ರ,ನಿ.ನೌ.ಸಂಘ ಕಾವೂರು ಇದರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಷಣ್ಮುಖಪ್ಪ ಬಾವಿ ಕಾರ್ಯಕ್ರಮ ನಿರೂಪಿಸಿದರು.







