ʼಮಿರಾಕಲ್ ಮೈಂಡ್ʼ ಹೊಸ ಆನ್‌ಲೈನ್ ಮಾನಸಿಕ ಆರೋಗ್ಯ ವೇದಿಕೆ ಉದ್ಘಾಟನೆ

ಮಂಗಳೂರು : ಮಾನಸಿಕ ಆರೋಗ್ಯ ಬೆಂಬಲವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮಹತ್ವದ ಹೆಜ್ಜೆಯಲ್ಲಿ, ಕಾಸರಗೋಡು ಜಿಲ್ಲೆಯ ಸಲಹೆಗಾರ ಮನೋವಿಜ್ಞಾನಿಗಳಾದ ಮುರ್ಶಿದಾ ಸಿರಾಜ್ ಮತ್ತು ಶಹೀಲಾ ಶಹೀರ್ ಅವರು ಮಿರಾಕಲ್ ಮೈಂಡ್ ಆನ್‌ಲೈನ್ ಮಾನಸಿಕ ಆರೋಗ್ಯ ಸೇವೆಗಳನ್ನು ಪ್ರಾರಂಭಿಸಿದ್ದಾರೆ.
ಈ ವೇದಿಕೆಯು ವೃತ್ತಿಪರ ಸಮಾಲೋಚನೆ ಮತ್ತು ಮನೋಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಸುತ್ತಲಿನ ಮೂಡ ನಂಬಿಕೆಗಳನ್ನು ತಡೆಗಟ್ಟಲು ಹಾಗೂ ಮಾನಸಿಕ ಕ್ಷೇಮದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಮುರ್ಶಿದಾ ಸಿರಾಜ್ ಮಾತನಾಡಿ, ಸಾಂಸ್ಕೃತಿಕ ಅಡೆತಡೆಗಳ ಕಾರಣದಿಂದ ಜನರು ಮಾನಸಿಕ ಆರೋಗ್ಯಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆಯದೆ ಹಿಂಜರಿಯುತ್ತಿದ್ದಾರೆ. ಇವರ ಸೇವೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುವ ವಿವಿಧ ಮಾನಸಿಕ ಆರೋಗ್ಯ ವಿಷಯಗಳ ಕುರಿತ ವೆಬಿನಾರ್‌ಗಳು ಸಹ ಸೇರಿವೆ. ಹೆಚ್ಚುವರಿಯಾಗಿ, ಸಂಸ್ಥಾಪಕರು ಭವಿಷ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಉಚಿತ ಸಮಾಲೋಚನೆಗಳನ್ನು ಒದಗಿಸುವ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಅಧಿಕೃತ ವೆಬ್‌ಸೈಟ್ www.miraclemynd.com ಅನ್ನು ಇಂದು(ಫೆ.8) ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಕನಚೂರು ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾದ ಡಾ.ಕನಚೂರು ಮೋನು, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಪ್ರದೀಪ್ ಕುಮಾರ್ ಕಲ್ಕುರ, ಎ.ಆರ್. ಸುಬ್ಬಯ್ಯಕಟ್ಟೆ, ಕೆ. ಹರೀಶ್ ಕುಮಾರ್, ಇನಾಯತ್ ಅಲಿ, ಎಂ. ಮಿಥುನ್ ರೈ, ವೀಣ್ ಚಂದ್ರ ಆಳ್ವ, ಗಿರೀಶ್ ಶೆಟ್ಟಿ, ಉದಿನೂರು ಮೊಹಮ್ಮದ್ ಕುಂಞಿ, ಕೆ.ಸಿ. ನಾಸರ್ ಅವರು ಉಪಸ್ಥಿತರಿದ್ದರು.







