ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: ಮಿಶಲ್ ಅಸದಿಗೆ 621 ಅಂಕ

ಮಂಗಳೂರು: ಕಾರ್ಕಳದ ಜ್ಞಾನ ಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಮಿಶಲ್ ಅಸದಿ ಎಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 621 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಐದನೇ ಟಾಪರ್ ಆಗಿದ್ದಾರೆ.
ಮರು ಮೌಲ್ಯಮಾಪನಕ್ಕೆ ಮುನ್ನ ಅವರು 6ನೇ ಸ್ಥಾನದಲ್ಲಿದ್ದರು. ಸಮಾಜ ವಿಜ್ಞಾನದಲ್ಲಿ ಅವರಿಗೆ ಮರುಮೌಲ್ಯಮಾಪನದಲ್ಲಿ 1ಅಂಕ ಅಧಿಕ ದೊರೆತಿದೆ. ಹಿಂದೆ ಸಮಾಜ ವಿಜ್ಞಾನದಲ್ಲಿ ಅವರು 78 ಅಂಕ ಪಡೆದಿದ್ದರು.
ಇವರು ಬಜಗೋಳಿ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸದ ಪ್ರಾಧ್ಯಾಪಕ ಎಂ.ಜಿ. ಅಸಾದಿ - ರಹೀನಾ ದಂಪತಿ ದ್ವಿತೀಯ ಪುತ್ರಿ.
Next Story