ಎಡಪದವು ತಲವಾರು ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಭೇಟಿಯಾದ ಮಿಥುನ್ ರೈ

ಮೂಡುಬಿದಿರೆ : ಎಡಪದವಿನಲ್ಲಿ ಸೋಮವಾರ ತಲವಾರು ದಾಳಿಗೆ ಒಳಗಾಗಿ ಮೂಡುಬಿದಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರುವೈಲ್ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿಯಾದರು.
ತಪ್ಪಿತಸ್ಥ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದಭ೯ದಲ್ಲಿ ಮುಖಂಡರಾದ ಪ್ರವೀಣ್ ಕುಮಾರ್, ಅನೀಶ್ ಡಿ'ಸೋಜಾ, ರಾಜೇಶ್ ಕಡಲಕೆರೆ, ಸಂದೀಪ್ ಆಲಂಗಾರು, ಪೂರ್ಣಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
Next Story





