ಡಿ.5ರಂದು ʼಮಾದರಿ ಮದುವೆ ಅಭಿಯಾನ’ : ಕಲ್ಲಡ್ಕದಲ್ಲಿ ಸಮಾವೇಶ

ಸಾಂದರ್ಭಿಕ ಚಿತ್ರ | Photo Credit : freepik
ಕಲ್ಲಡ್ಕ, ಡಿ.4: ಮದುವೆಗಳನ್ನು ಅನಾಚಾರ ಮುಕ್ತಗೊಳಿಸುವ ಮತ್ತು ಮದುವೆಯ ಆರ್ಥಿಕ ಭಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು ಹಮ್ಮಿಕೊಂಡ ’ಮಾದರಿ ಮದುವೆ: ಶತದಿನ ಅಭಿಯಾನ’ದ ಪ್ರಯುಕ್ತ ಜಾಗೃತಿ ಸಮಾವೇಶವು ಡಿ.5ರ ಸಂಜೆ 7ಕ್ಕೆ ಕಲ್ಲಡ್ಕ ಸಮೀಪದ ಸುರಿಬೈಲು ದಾರುಲ್ ಅಶ್ಅರಿಯ ಅಷ್ಟೇಯ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ಅಭಿಯಾನದ ಪ್ರೊಮೋಶನ್ ಕೌನ್ಸಿಲ್ ಕನ್ವೀನರ್ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸ್ಥೆಯ ಆಡಳಿತ ನಿರ್ದೇಶಕ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಶಿಹಾಬುದ್ದೀನ್ ತಂಞಳ್ ಮದಕ ನೇತೃತ್ವದಲ್ಲಿ ಬುರ್ದಾ ಮತ್ತು ಪ್ರಾರ್ಥನಾ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





