ಮಾಂಟ್ರಾಡಿ | ರಿಕ್ಷಾ ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿಯಿಂದ ನಗದು ಲೂಟಿ

ಮೂಡುಬಿದಿರೆ, ಡಿ.11: ಮಾಂಟ್ರಾಡಿಯಲ್ಲಿ ಗುರುವಾರ ನಸುಕಿನ ಜಾವ ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿ ಬಳಿಯಿದ್ದ 19 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಈದು ಗ್ರಾಮದ ಮುಹಮ್ಮದ್ ಹಣ ಕಳಕೊಂಡವರು.
ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಮುಹಮ್ಮದ್ ಮಂಗಳೂರಿನಿಂದ ಹಣ್ಣು ಖರೀದಿಸಲು ಗುರುವಾರ ನಸುಕಿನ ಜಾವ ಈದುನಿಂದ ರಿಕ್ಷಾದಲ್ಲಿ ಹೊರಟಿದ್ದರು.
ಮಾಂಟ್ರಾಡಿ ತಲುಪಿದಾಗ ಕಾರಿನಲ್ಲಿ ಬಂದ ಅಪರಿಚಿತರ ತಂಡ ಇವರ ರಿಕ್ಷಾವನ್ನು ಅಡ್ಡಗಟ್ಟಿ, ಬೆದರಿಸಿ, 19 ಸಾವಿರ ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





