ಮೊಂಟೆಪದವು | ಸಂಶಯಾಸ್ಪದವಾಗಿ ಮಹಿಳೆಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಕೊಣಾಜೆ : ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಕೆರೆಯೊಂದರಲ್ಲಿ ಮಹಿಳೆಯೊರ್ವರ ಮೃತದೇಹವು ಸಂಶಯಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಸಕಲೇಶಪುರ ಮೂಲದ ಸುಂದರಿ(35) ಎಂದು ಗುರುತಿಸಲಾಗಿದೆ.
ಈ ಮಹಿಳೆಯು ಅವಿವಾಹಿತಳಾಗಿದ್ದು, ಗುದ್ರು ತೋಟದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮಹಿಳೆಯು ಸ್ಥಳೀಯವಾಗಿ ಬೇರೆಯವರ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಗುರುವಾರದಂದು ಮಹಿಳೆಯ ಮೃತದೇಹವು ಕೊಳೆತ ರೀತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದು, ದೇಹಕ್ಕೆ ಕೆಂಪು ಕಲ್ಲನ್ನು ಕಟ್ಟಲಾಗಿದ್ದು, ಕೊಲೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





