ಮೂಡುಬಿದಿರೆ: ICYMನಿಂದ ಸರ್ವಧರ್ಮಿಯರೊಂದಿಗೆ ತೆನೆ ಹಬ್ಬ ಆಚರಣೆ

ಮೂಡುಬಿದಿರೆ, ಸೆ.17: ಭಾರತೀಯ ಕೆಥೊಲಿಕ್ ಯುವ ಸಂಚಲನ(ICYM) ಮೂಡುಬಿದಿರೆ ವಲಯ ಹಾಗೂ ಪರಿಸರದ ಹಲವು ಸಂಘಟನೆಗಳ ಸಹಯೋಗದಲ್ಲಿ ಮಾತೆ ಮೇರಿಯಮ್ಮನ ಜನ್ಮದಿನದ ಅಂಗವಾಗಿ ‘ಸರ್ವಧರ್ಮಿಯರೊಂದಿಗೆ ತೆನೆ ಹಬ್ಬ’ ಕಾರ್ಯಕ್ರಮ ಇಲ್ಲಿನ ಸುವರ್ಣ ಮಂದಿರದಲ್ಲಿ ಶನಿವಾರ ನಡೆಯಿತು.
ಧರ್ಮಗುರು ಅತೀ ವಂ.ಓನಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಸರ್ಕಲ್ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ಭಾಗವಹಿಸಿದ್ದರು.
ಕೆಥೊಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ ಅವಿಲ್ ಡಿಸೋಜ, ರೊಟರಾಕ್ಟ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ಫರಾಝ್, ರೋಟರಿ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ರೊ.ನಾಗಾರಾಜ್ ಬಿ., ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಪರವಾಗಿ ರೊ.ಪೂರ್ಣಚಂದ್ರ, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಅಧ್ಯಕ್ಷ ರೊ.ಮಹೇಂದ್ರ, ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ ಅನ್ನ್ ಸರಿತಾ ಆಶೀರ್ವಾದ್, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಲ.ಜೊಸ್ಸಿ ಮಿನೇಜಸ್, ಲಯನ್ಸ್ ಕ್ಲಬ್ ಅಲಂಗಾರು ಇದರ ಅಧ್ಯಕ್ಷರು ಲಾಯ್ಡ್ ರೇಗೊ, ಯುವ ಕೊಂಕಣಿ ಅಸೋಸಿಯೇಶನ್ ಅಧ್ಯಕ್ಷ ಅನಿಷ್ ಡಿಸೋಜ, ಜೆ.ಸಿ.ಐ. ತ್ರಿಭುವನ್ ಅಧ್ಯಕ್ಷ ಸುನೀಲ್ ಕುಮಾರ್ ಹಾಗೂ ಐ.ಸಿ.ವೈ.ಎಂ. ಮೂಡುಬಿದಿರೆ ವಲಯ ಅಧ್ಯಕ್ಷ ಬ್ರೆಂಡನ್ ಕುಟಿನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.





