ಮೋಂಟುಗೋಳಿ: ಗೌಸಿಯಾ ಜುಮಾ ಮಸೀದಿ, ಮದರಸ ವತಿಯಿಂದ ಮೀಲಾದುನ್ನಬಿ ಆಚರಣೆ

ಮಂಗಳೂರು: ಗೌಸಿಯಾ ಜುಮಾ ಮಸೀದಿ ಮೋಂಟುಗೋಳಿ ವತಿಯಿಂದ ಮೀಲಾದುನ್ನಬಿ ಆಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷರಾದ ಸುಲೈಮಾನ್ ನೆರವೇರಿಸಿದರು. ಖತೀಬ್ ಅಬೂಬಕ್ಕರ್ ಸಅದಿ ಸಂದೇಶ ಭಾಷಣ ಮಾಡಿದರು. ಮದ್ರಸ ಮುಖ್ಯೋಪಾಧ್ಯಾಯರಾದ ರಫೀಕ್ ಸಅದಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಸೀದಿ, ಮದ್ರಸಾ ಸಮಿತಿಯ ಪದಾಧಿಕಾರಿಗಳು, ಮೊಹಲ್ಲಾ ನಿವಾಸಿಗಳು ಹಾಗೂ ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





