ಮೋಂಟುಗೋಳಿ: ಗೌಸಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಮೋಂಟುಗೋಳಿ: ಗೌಸಿಯಾ ಜುಮಾ ಮಸೀದಿ ಮೋಂಟುಗೋಳಿ ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗಡಿಯಾರ ಸಮೂಹದ ಕಂಪನಿಯ ನಿರ್ದೇಶಕ ಇಬ್ರಾಹಿಂ ಗಡಿಯಾರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಹ್ಮದ್ ಬಾವ ಪಡೀಲ್ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಜಮಾಅತ್ ಅಧ್ಯಕ್ಷ ಸುಲೈಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದರ್ ಉಸ್ತಾದ್ ರಫೀಕ್ ಸಅದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





